ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪದ್ಧತಿಯಂತೆ ಪೂಜೆ ಮಾಡಿ ದೇವರನ್ನು ಪ್ರಾರ್ಥಿಸುವುದ್ರಿಂದ ದೇವರ ಕೃಪೆಗೆ ಪಾತ್ರರಾಗಬಹುದು. ಪೂಜೆ ಮಾಡುವ ವಿಧಿ-ವಿಧಾನಗಳನ್ನೂ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಕೆಲವೊಂದು ಪೂಜಾ ಸಾಮಗ್ರಿಗಳನ್ನು ನೇರವಾಗಿ ನೆಲದ ಮೇಲಿಡಬಾರದೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಶಾಸ್ತ್ರದ ಪ್ರಕಾರ ದೀಪವನ್ನು ನೇರವಾಗಿ ನೆಲದ ಮೇಲಿಡಬಾರದು. ದೀಪದ ಕೆಳಗೆ ಸ್ವಲ್ಪ ಉಪ್ಪು ಅಥವಾ ಮರದ ಹಲಗೆಯನ್ನಿಡಬೇಕು.
ಪೂಜೆಗೆ ಬಳಸುವ ಅಡಿಕೆಯನ್ನು ನೇರವಾಗಿ ನೆಲದ ಮೇಲಿಡುವುದು ಶುಭವಲ್ಲ. ನಾಣ್ಯದ ಮೇಲೆ ಅಥವಾ ವೀಳ್ಯದೆಲೆ ಮೇಲೆ ಅಡಿಕೆಯನ್ನಿಡಬೇಕು.
ಸಾಲಿಗ್ರಾಮವನ್ನು ಕೂಡ ನೆಲಕ್ಕಿಡಬಾರದು. ಬಟ್ಟೆಯನ್ನು ಕೆಳಗಿಟ್ಟು ಅದ್ರ ಮೇಲೆ ನಾಣ್ಯವನ್ನಿಡಬೇಕು.
ಪೂಜಾ ಸ್ಥಳದಲ್ಲಿ ಮಣಿ ಅಥವಾ ರತ್ನವನ್ನಿಡ ಬಯಸಿದ್ದರೆ ಕೆಳಗೆ ಬಟ್ಟೆ ಇಟ್ಟು ಅದ್ರ ಮೇಲೆ ಮಣಿಯನ್ನಿಡಿ.
ಮರ ಅಥವಾ ಬೆಳ್ಳಿ, ಬಂಗಾರದ ಪೀಠದ ಮೇಲೆ ದೇವರ ಮೂರ್ತಿಗಳನ್ನಿಡಬೇಕು. ಅದ್ರಲ್ಲೂ ಪೀಠದ ಮೇಲೆ ಅಕ್ಕಿ ಹಾಕಿ ಅದ್ರ ಮೇಲೆ ಮೂರ್ತಿಗಳನ್ನಿಡುವುದು ಮತ್ತಷ್ಟು ಶ್ರೇಷ್ಠ.
ಜನಿವಾರವನ್ನು ಸ್ವಚ್ಛವಾಗಿರುವ ಬಟ್ಟೆ ಮೇಲಿಡಬೇಕು. ಶಂಖವನ್ನು ಕೂಡ ನೆಲಕ್ಕಿಡಬಾರದು.