ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಕಾಮನ್ ಆಗಿಬಿಟ್ಟಿದೆ. ಬಹುತೇಕರಿಗೆ ಉದರ ಬಾಧೆ, ಹೊಟ್ಟೆ ನೋವಿನ ತೊಂದರೆಗಳು ಕಾಡುತ್ತವೆ. ಇದಕ್ಕೆ ಕಾರಣ ನಾವು ಸೇವಿಸುವ ಆಹಾರ ಮತ್ತು ಕೆಟ್ಟ ಜೀವನಶೈಲಿ. ಈ ಸಮಸ್ಯೆಗೆ ಬೆಲ್ಲದಿಂದ ಪರಿಹಾರವಿದೆ. ಬೆಲ್ಲ ದೇಹದಲ್ಲಿ ಉಷ್ಣವನ್ನುಂಟುಮಾಡುವ ಗುಣಗಳನ್ನು ಹೊಂದಿದೆ. ಬೆಲ್ಲವನ್ನು ತಿಂದರೆ ಶೀತದಿಂದ ಉಪಶಮನ ದೊರೆಯುತ್ತದೆ. ಜೊತೆಗೆ ದೇಹದ ಜೀರ್ಣಾಂಗ ವ್ಯವಸ್ಥೆಯನ್ನೂ ಆರೋಗ್ಯವಾಗಿಡುತ್ತದೆ. ಅನೇಕ ರೋಗಗಳಿಂದ ಮುಕ್ತಿ ಸಿಗುತ್ತದೆ.
ರಕ್ತದ ಕೊರತೆ ನೀಗಿಸುತ್ತದೆ…
ರಕ್ತಹೀನತೆಯಿಂದ ಬಳಲುತ್ತಿರುವವರು ಚಳಿಗಾಲದಲ್ಲಿ ಬೆಲ್ಲ ತಿನ್ನುವುದು ತುಂಬಾ ಪ್ರಯೋಜನಕಾರಿ. ಬೆಲ್ಲದ ಸೇವನೆಯಿಂದ ದೇಹದಲ್ಲಿನ ಹಿಮೋಗ್ಲೋಬಿನ್ ಕೊರತೆ ದೂರವಾಗುತ್ತದೆ. ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ. ಬೆಲ್ಲದಲ್ಲಿ ರಂಜಕ ಮತ್ತು ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಮೊಡವೆಗಳಿಂದ ಪರಿಹಾರ…
ಯೌವನದಲ್ಲಿ ಮುಖದ ಮೇಲೆ ಮೊಡವೆಗಳಾಗುವುದು ಸಹಜ. ಈ ಮೊಡವೆಗಳ ಮೂಲಕ ದೇಹದ ಹಾನಿಕಾರಕ ವಿಷಗಳು ಹೊರಬರುತ್ತವೆ. ಮೊಡವೆಗಳಿಂದ ಮುಖದ ಅಂದ ಹಾಳಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ನೀವು ಬೆಲ್ಲವನ್ನು ಸೇವಿಸಲು ಪ್ರಾರಂಭಿಸಬೇಕು. ಬೆಲ್ಲವನ್ನು ತಿನ್ನುವುದರಿಂದ ಮುಖದ ಮೇಲೆ ಮೊಡವೆಗಳಾಗುವುದಿಲ್ಲ. ಮುಖದ ಕಾಂತಿಯೂ ಹೆಚ್ಚುತ್ತದೆ.
ಜೀರ್ಣಾಂಗ ವ್ಯವಸ್ಥೆ ಸುಧಾರಣೆ…
ಬೆಲ್ಲದಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ನೀವು ಊಟದ ನಂತರ ಬೆಲ್ಲವನ್ನು ಸೇವಿಸಿದರೆ, ಅದು ಹೊಟ್ಟೆಯನ್ನು ಫಿಟ್ ಆಗಿ ಇರಿಸಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಬೆಲ್ಲವನ್ನು ಸೇವಿಸುವುದರಿಂದ ಶೀತದಿಂದಲೂ ಪರಿಹಾರ ದೊರೆಯುತ್ತದೆ.
ಕೆಮ್ಮು ಮತ್ತು ಶೀತಕ್ಕೆ ಮದ್ದು…
ಚಳಿಗಾಲದಲ್ಲಿ ಜ್ವರ, ಶೀತದ ತೊಂದರೆ ಸಾಮಾನ್ಯ. ನಿಯಮಿತವಾಗಿ ಬೆಲ್ಲವನ್ನು ಸೇವಿಸಿದರೆ ಶೀತಕ್ಕೆ ಪರಿಹಾರ ಸಿಗುತ್ತದೆ. ಬೆಲ್ಲದ ಜೊತೆಗೆ ಕಾಳುಮೆಣಸು ಮತ್ತು ಶುಂಠಿಯನ್ನು ಬೆರೆಸಿ ಸೇವನೆ ಮಾಡುವುದು ಉತ್ತಮ.
ಕೀಲು ನೋವಿಗೆ ಮದ್ದು…
ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಎಲ್ಲಾ ವಯೋಮಾನದವರು ಸಮಸ್ಯೆ ಎದುರಿಸುತ್ತಾರೆ. ಈ ಸಮಸ್ಯೆಗೂ ಬೆಲ್ಲದಿಂದ ಪರಿಹಾರ ಸಿಗುತ್ತದೆ. ಬೆಲ್ಲ ಮತ್ತು ಶುಂಠಿಯನ್ನು ಪ್ರತಿದಿನ ತಿನ್ನುವುದರಿಂದ ಕೀಲು ನೋವಿನಿಂದ ಮುಕ್ತಿ ಪಡೆಯಬಹುದು.