ಹಸಿವಿನ ಭಾವನೆ ಸಾಮಾನ್ಯ. ಆದರೆ ಯಾವಾಗಲೂ ಹಸಿವಾದಂತೆ ಅನಿಸುವುದು, ಏನನ್ನಾದರೂ ತಿನ್ನಬೇಕು ಎನಿಸುವುದು ಸಹಜವಲ್ಲ. ಇದರ ಹಿಂದೆ ಹಲವು ಕಾರಣಗಳಿರಬಹುದು. ಸದಾ ಹಸಿವಿನ ಭಾವನೆಗೆ ಕಾರಣ ದೇಹದಲ್ಲಿ ಪ್ರೋಟೀನ್ ಮತ್ತು ಫೈಬರ್ ಕೊರತೆಯೂ ಆಗಿರಬಹುದು. ಅದಕ್ಕಾಗಿಯೇ ನಿಮ್ಮ ಆಹಾರದಲ್ಲಿ ಪೋಷಕಾಂಶಗಳ ಕೊರತೆ ಇರದಂತೆ ನೋಡಿಕೊಳ್ಳಿ.
ಸಮಯದ ಅಭಾವದಿಂದ ನೀವು ಕಡಿಮೆ ನಿದ್ದೆ ಮಾಡುತ್ತಿದ್ದರೆ ಅದು ಕೂಡ ಹಸಿವಿನ ಸಮಸ್ಯೆಗೆ ಕಾರಣವಾಗುತ್ತದೆ. ಪ್ರತಿನಿತ್ಯ ಕಡ್ಡಾಯವಾಗಿ 8 ಗಂಟೆ ನಿದ್ದೆ ಮಾಡಬೇಕು. ನಿದ್ರೆಯ ಕೊರತೆಯಿಂದಾಗಿ ಪದೇ ಪದೇ ಹಸಿವು ಕಾಡಲಾರಂಭಿಸುತ್ತದೆ. ಹಸಿವನ್ನು ನಿಯಂತ್ರಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ನೀರು ಕುಡಿಯುವುದು.
ತೀರಾ ಹಸಿವಾದಂತೆ ಅನಿಸಿದಾಗ ನೀರು ಕುಡಿಯಿರಿ. ಹಸಿವು ಎನಿಸಿದಾಗ ಕರಿದ ಪದಾರ್ಥಗಳನ್ನು ತಿನ್ನುವುದಕ್ಕಿಂತ ಸೇಬು ತಿನ್ನುವುದು ಉತ್ತಮ. ಸೇಬಿನಲ್ಲಿರುವ ಫೈಬರ್ ನಿಮ್ಮ ಹಸಿವನ್ನು ಶಾಂತಗೊಳಿಸುತ್ತದೆ. ಅದಕ್ಕಾಗಿಯೇ ಪ್ರತಿದಿನ ಸೇಬು ತಿನ್ನಿರಿ. ಕೆಲವರಿಗೆ ವೇಗವಾಗಿ ಊಟ ಮಾಡುವ ಅಭ್ಯಾಸವಿರುತ್ತದೆ. ತರಾತುರಿಯಲ್ಲಿ ಆಹಾರ ಸೇವಿಸುವುದರಿಂದ ಹೊಟ್ಟೆ ಯಾವಾಗಲೂ ಹಸಿದಂತಾಗುತ್ತದೆ. ಅದಕ್ಕಾಗಿಯೇ ಯಾವಾಗಲೂ ಆಹಾರವನ್ನು ನಿಧಾನವಾಗಿ ಅಗಿದು ತಿನ್ನಬೇಕು. ಪದೇ ಪದೇ ಹಸಿವಾಗುತ್ತಿದ್ದರೆ ವಾಲ್ ನಟ್ ತಿನ್ನಬಹುದು. ವಾಲ್ ನಟ್ ಸೇವನೆಯಿಂದ ಹಸಿವು ಕಡಿಮೆಯಾಗುತ್ತದೆ.