ನೀವು ಪದೇ ಪದೇ ಸಂಚಾರ ನಿಯಮ ಉಲ್ಲಂಘನೆ ಮಾಡ್ತೀರಾ..? ಸಿಸಿ ಕ್ಯಾಮರಾದಲ್ಲಿ ಸೆರೆಯಾಗುತ್ತೆ ಅಂದರೂ ನಿಯಮ ಉಲ್ಲಂಘನೆ ಮಾಡ್ತೀರಾ..? ಹಾಗಾದ್ರೆ ನಿಮ್ಮ ಮನೆಗಳಿಗೆ ಗ್ಯಾರಂಟಿ ಪೊಲೀಸರು ಹುಡುಕಿಕೊಂಡು ಬರ್ತಾರೆ ನೋಡಿ. ಅರೆ ಏನಿದು ಅಂತೀರಾ ಹಾಗಾದ್ರೆ ಮುಂದೆ ಓದಿ.
ಹೌದು, ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಟ್ರಾಫಿಕ್ ಪೊಲೀಸರು ಹೊಸ ಪ್ರಯೋಗ ಶುರು ಮಾಡಿದ್ದಾರೆ. ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರ ಮನೆಗಳಿಗೆ ತೆರಳಿ ದಂಡ ವಸೂಲಿ ಮಾಡಲು ಪೊಲೀಸರು ಹೊರಟಿದ್ದಾರೆ. ಈ ಮೂಲಕ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ದಂಡಾಸ್ತ್ರಕ್ಕೆ ಪೊಲೀಸರು ಮುಂದಾಗಿದ್ದಾರೆ.
ನಂಬರ್ ಟ್ರೇಸ್ ಮಾಡಿದ ನಂತರ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ ಗೆ ಕಳುಹಿಲಾಗುತ್ತದೆ. ಅಲ್ಲಿಂದ ಈ ವಾಹನ ಮಾಲೀಕರ ಸದ್ಯದ ವಿಳಾಸವನ್ನು ಸಾರಿಗೆ ಇಲಾಖೆಯ ಸಿಬ್ಬಂದಿಗೆ ರವಾನಿಸಲಾಗುತ್ತದೆ. ವಿಳಾಸ ಬದಲಾದರೆ ನೋಟೀಸ್ ನಿಂದ ತಪ್ಪಿಸಿಕೊಳ್ಳಬಹುದು ಎಂದುಕೊಂಡರೆ ಅದು ನಿಮ್ಮ ಭ್ರಮೆ ಅಷ್ಟೆ.
ಇಷ್ಟು ದಿನ ಸಿಸಿ ಕ್ಯಾಮರಾ ನೋಡಿ ನಂಬರ್ ಪ್ಲೇಟ್ ಟ್ರೇಸ್ ಮಾಡಿ ದಂಡ ಹಾಕಲಾಗ್ತಾ ಇತ್ತು. ಆದರೆ ಇದು ನಿರೀಕ್ಷಿತ ಫಲ ನೀಡ್ತಾ ಇಲ್ಲ ಎಂಬ ಕಾರಣಕ್ಕೆ ಈ ರೀತಿಯ ಹೊಸ ಮಾರ್ಗ ಹುಡುಕಲಾಗಿದೆ. ಸದ್ಯ ಈ ವಿಧಾನವನ್ನು ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಆರಂಭ ಮಾಡಲಾಗುತ್ತಿದೆ. ಯಶಸ್ವಿಯಾದರೆ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತದೆ. ಆದರೆ ಇದೆಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಕಾದು ನೋಡಬೇಕು.