ಯಾವುದೇ ಸಮಾರಂಭಕ್ಕೆ ತೆರಳಬೇಕು ಎನ್ನುವಾಗಲೇ ಮುಖದ ಮೇಲೆ ದೊಡ್ಡದಾಗಿ ಮೊಡವೆ ಮೂಡಿ ನಿಮ್ಮ ಉತ್ಸಾಹವನ್ನೆಲ್ಲಾ ಕುಗ್ಗಿಸಿ ಬಿಡುತ್ತದೆ. ಈ ಸಂದರ್ಭದಲ್ಲಿ ನೀವು ಮಾಡುವ ಕೆಲವು ತಪ್ಪುಗಳು ಅದನ್ನು ಶಾಶ್ವತ ಕಲೆಯಾಗಿಸಿ ಬಿಡುತ್ತವೆ.
ಮೊಡವೆಗಳನ್ನು ಪದೇ ಪದೇ ಮುಟ್ಟಬೇಡಿ. ಹೀಗೆ ಮುಟ್ಟುವುದರಿಂದ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಸೋಂಕು ಉಂಟಾಗಬಹುದು.
ಮೊಡವೆಗಳನ್ನು ಚಿವುಟಿ ಕೀವು ತೆಗೆದರೆ ಮೊಡವೆ ಮಾಯವಾಗುತ್ತದೆ ಎಂದುಕೊಳ್ಳಬೇಡಿ. ಮೊಡವೆ ಮುಟ್ಟಿದಷ್ಟು, ಒಡೆದಷ್ಟು ಕಲೆ ಉಳಿಯುವ ಸಾಧ್ಯತೆ ಹೆಚ್ಚು. ಅಲ್ಲದೆ ಮೊಡವೆ ದೂರವಾಗಲು ಮತ್ತಷ್ಟು ಸಮಯ ತೆಗೆದುಕೊಳ್ಳುತ್ತದೆ.
ಮೊಡವೆಯ ಸುತ್ತ ಬಿಸಿ ಬಟ್ಟೆಯಲ್ಲಿ ಶಾಖ ಕೊಡುವುದರಿಂದ ಮೊಡವೆ ಗುಣವಾಗುತ್ತದೆ ಎಂದುಕೊಂಡಿದ್ದರೆ ಅದು ತಪ್ಪು. ಈ ಶಾಖ ಮೊಡವೆಯ ಜಾಗಕ್ಕೆ ಹೆಚ್ಚು ನೋವುಂಟು ಮಾಡಿ ಮತ್ತಷ್ಟು ಮೊಡವೆ ದೊಡ್ಡದಾಗುವಂತೆ ಮಾಡುತ್ತವೆ.
ಮೇಕಪ್ ಮಾಡುವ ಬ್ರಶ್ ಗಳ ಮೇಲೆಯೂ ಎಚ್ಚರವಿರಲಿ. ಇವು ಚುಚ್ಚಿ ಮೊಡವೆ ಒಡೆಯದಂತೆ ನೋಡಿಕೊಳ್ಳಿ. ಮೊಡವೆಗಳ ಮೇಲೆ ಹೆಚ್ಚು ಮೇಕಪ್ ಬಳಸುವುದೂ ಒಳ್ಳೆಯದಲ್ಲ.