alex Certify ಪದೇ ಪದೇ ಕಾಡುವ ‘ಗ್ಯಾಸ್ಟ್ರಿಕ್’ ಸಮಸ್ಯೆಗೆ ಇಲ್ಲಿದೆ ಪರಿಹಾರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ಕಾಡುವ ‘ಗ್ಯಾಸ್ಟ್ರಿಕ್’ ಸಮಸ್ಯೆಗೆ ಇಲ್ಲಿದೆ ಪರಿಹಾರ…..!

ಹೊಟ್ಟೆಯಲ್ಲಿ ಉರಿ, ಹೊಟ್ಟೆ ಬಿಗಿತ, ಹೊಟ್ಟೆ ನುಲಿಯುವುದು, ಎದೆ ಉರಿ ಇವೆಲ್ಲವೂ ಗ್ಯಾಸ್ಟ್ರಿಕ್ ನ ಲಕ್ಷಣಗಳು. ಕೆಲವೊಮ್ಮೆ ನಾವು ಸೇವಿಸಿದ ಆಹಾರದಿಂದಲೂ ಸಹ ಈ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ. ಈ ರೀತಿಯ ಸಮಸ್ಯೆ ಪ್ರತಿನಿತ್ಯವೂ ಕಾಡುತ್ತಿದ್ದರೆ, ವೈದ್ಯರನ್ನು ಕಾಣುವುದು ಉತ್ತಮ.

ಆದರೆ ಯಾವಾಗಲಾದರೂ ಒಮ್ಮೆ ಕಂಡು ಬಂದಲ್ಲಿ ಮನೆಯಲ್ಲೇ ಸರಳವಾದ ಉಪಚಾರಗಳ ಮೂಲಕ ಈ ಸಮಸ್ಯೆಯಿಂದ ದೂರವಿರಬಹುದು.

* ಊಟಕ್ಕೆ ಮುಂಚೆ ಕನಿಷ್ಟ ಒಂದು ಗ್ಲಾಸ್ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ನೀರು ಜೀರ್ಣಾಂಗ ವ್ಯವಸ್ಥೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ.

* ಚೂಯಿಂಗ್ ಗಮ್ ಜಗಿಯುತ್ತಾ ಮಾತನಾಡುವ ಅಭ್ಯಾಸವಿದ್ದರೆ ಕೂಡಲೇ ನಿಲ್ಲಿಸಿ. ಏಕೆಂದರೆ, ಮಾತನಾಡುವಾಗ ಗಾಳಿಯೂ ಒಳ ಸೇರಿ, ಹೊಟ್ಟೆ ಉಬ್ಬರ ಕಾಣಿಸಿಕೊಂಡು ಗ್ಯಾಸ್ ಉತ್ಪತ್ತಿಯಾಗುತ್ತದೆ.

* ಹೊಟ್ಟೆಯಲ್ಲಿ ಸೇರಿರುವ ಗ್ಯಾಸನ್ನು ಶಮನ ಮಾಡಲು ಹರ್ಬಲ್ ಪಾನೀಯಗಳು ಬಹಳಾನೇ ಉತ್ತಮ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

* ಹೊಟ್ಟೆಗೆ ಗ್ಯಾಸ್ ಹೋಗದಂತೆ ಮಾಡಲು, ನಾವು ಸೇವಿಸುವ ಆಹಾರದಲ್ಲಿ ಗ್ಯಾಸ್ ಇರುವ ಆಹಾರಗಳನ್ನು ನಿಲ್ಲಿಸಿ. ಉದಾ: ಅವರೆಕಾಳು, ಬೇಳೆಗಳು, ಎಲೆಕೋಸು, ಮೂಲಂಗಿ ಇತ್ಯಾದಿ.

* ಪೆಪ್ಸಿ, ಕೋಕಾಕೋಲ, ಸ್ಪ್ರೈಟ್ ಮುಂತಾದ ಸೋಡಾ ಇರುವಂತಹ ಪಾನೀಯಗಳನ್ನು ನಿಲ್ಲಿಸಿ. ಇದು ಹೊಟ್ಟೆಯಲ್ಲಿ ಗ್ಯಾಸ್ ತುಂಬಿ ಸಮಸ್ಯೆಯನ್ನು ಇನ್ನೂ ಹೆಚ್ಚಿಸುತ್ತವೆ.

* ರಾತ್ರಿ ಊಟವಾದ ಬಳಿಕ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಿದರೆ ಜೀರ್ಣಕ್ರಿಯೆ ಸರಿಯಾಗಿ ಆಗಿ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...