ಮನೆಯಲ್ಲಿ ಯಾರಾದರೂ ಅಸ್ವಸ್ಥರಾದರೂ ಅಂದ್ರೆ ಇಡೀ ಮನೆಯ ವಾತಾವರಣವೇ ಹಾಳಾಗಿ ಬಿಡುತ್ತೆ. ಇಂತಹ ಸಂದರ್ಭದಲ್ಲಿ ಮನೆಯ ವಾತಾವರಣವನ್ನ ಸರಿ ಮಾಡೋಕೆ ಕಲ್ಲುಪ್ಪು ನೆರವಾಗುತ್ತೆ ಎಂದು ಹೇಳುತ್ತೆ ವಾಸ್ತು ಶಾಸ್ತ್ರ.
ಕಾಯಿಲೆ ಬಂದಿರುವ ವ್ಯಕ್ತಿ ಮಲಗಿರುವ ಹಾಸಿಗೆಯ ಸಮೀಪದಲ್ಲೇ ಒಂದು ಸಣ್ಣ ಪಾತ್ರೆಯಲ್ಲಿ ಕಲ್ಲುಪ್ಪನ್ನ ಹಾಕಿಡಿ. ಈ ವೇಳೆಯಲ್ಲಿ ರೋಗಿಯ ತಲೆ ಪೂರ್ವ ದಿಕ್ಕಿನಲ್ಲೇ ಇರುವಂತೆ ಮಲಗಿಸಿ. ಅಲ್ಲದೇ ಈ ಉಪ್ಪುಗಳನ್ನ ವ್ಯಕ್ತಿಯ ಆಹಾರ ಕ್ರಮದಲ್ಲೂ ಬಳಕೆ ಮಾಡಬಹುದು. ಇದಾದ ಬಳಿಕ ರೋಗಿಯ ಆರೋಗ್ಯದಲ್ಲಿ ಕ್ರಮೇಣವಾಗಿ ಸುಧಾರಣೆ ಕಂಡು ಬರಲಿದೆ. ಅಲ್ಲದೇ ಮನೆಯಲ್ಲಿನ ಅಶಾಂತಿಯೂ ದೂರವಾಗಲಿದೆ.