
ಅಂದಾಹಾಗೆ, ಜಡಾ ಸೈಲ್ಸ್ ಆಸ್ಪತ್ರೆಯಲ್ಲಿದ್ದರೂ ತಮ್ಮ ಸ್ಮರಣೀಯ ಕ್ಷಣವನ್ನು ನನಸಾಗಿಸಿಕೊಂಡಿದ್ದಾರೆ. ವಿಶ್ವವಿದ್ಯಾನಿಲಯದ ಅಧ್ಯಕ್ಷರು ಸೈಲ್ಸ್ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದನ್ನು ಕಳೆದುಕೊಳ್ಳಬೇಕಾಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ವಿಶ್ವವಿದ್ಯಾನಿಲಯದ ಪ್ರಸ್ತುತ ಅಧ್ಯಕ್ಷರಾದ ಡಾ. ವಾಲ್ಟರ್ ಎಂ ಕಿಂಬ್ರೋ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಿಟ್ಯೂಟ್ ಸೈಲ್ಸ್ ಅನ್ನು ಅಚ್ಚರಿಗೊಳಿಸಲು ಹೇಗೆ ನಿರ್ಧರಿಸಿದೆ ಎಂಬುದನ್ನು ಟ್ವಿಟ್ಟರ್ ನಲ್ಲಿ ವಿವರಿಸಲಾಗಿದೆ.
ಶುಕ್ರವಾರ ಸಂಜೆ, ಸೈಲ್ಸ್ ಹೆರಿಗೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದ್ರು. ಅದೇ ದಿನ ಅವರು ನ್ಯೂ ಓರ್ಲಿಯನ್ಸ್‌ನ ಡಿಲ್ಲಾರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆಯಬೇಕಿತ್ತು. ಆದರೆ, ತಾನು ಮಗುವಿಗೆ ಜನ್ಮ ನೀಡಿದ್ರಿಂದ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಸೈಲ್ಸ್ ಗೆ ಸಾಧ್ಯವಾಗಲಿಲ್ಲ.
ವಿಶ್ವವಿದ್ಯಾನಿಲಯದ ಅಧ್ಯಕ್ಷರಾದ ಡಾ. ವಾಲ್ಟರ್ ಕಿಂಬ್ರೋ, ಸೈಲ್ಸ್ ಗೆ ಅಚ್ಚರಿ ನೀಡಿದ್ದಾರೆ. ನೇರ ಆಸ್ಪತ್ರೆಗೆ ತೆರಳಿದ ಅವರು ಅಲ್ಲಿಯೇ ಸೈಲ್ಸ್ ಗೆ ಪದವಿ ಪ್ರದಾನ ಮಾಡಿದ್ದಾರೆ. ಸೈಲ್ಸ್ ಕಪ್ಪು ಬಣ್ಣದ ಕ್ಯಾಪ್ ಮತ್ತು ಗೌನ್ ಧರಿಸಿದ್ದರು. ಈ ಸುಂದರ ಕ್ಷಣಕ್ಕೆ ನವಜಾತ ಶಿಶು ಸೇರಿದಂತೆ ಅವರ ಕುಟುಂಬ ಸಾಕ್ಷಿಯಾಯಿತು.