ಮಾಧ್ಯಮ ಸಂದರ್ಶನವೊಂದರ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಅಡ್ಡಿಪಡಿಸಿದ ವಿಡಿಯೋ ತುಣುಕೊಂದು ಆನ್ಲೈನ್ನಲ್ಲಿ ವೈರಲ್ ಆಗಿದೆ.
ತಮ್ಮ ಸಂಸದ ಸದಸ್ಯತ್ವ ರದ್ದಾದ ಬೆನ್ನಿಗೇ ಮೊದಲ ಬಾರಿಗೆ ರಾಹುಲ್ ಗಾಂಧಿ ಮಾಧ್ಯಮ ಸಂದರ್ಶನ ನೀಡಿದ ಸಂದರ್ಭದ ವಿಡಿಯೋ ಇದಾಗಿದೆ. ನವ ದೆಹಲಿಯಲ್ಲಿ ಶನಿವಾರದಂದು ಈ ಸಂದರ್ಶನ ಇಟ್ಟುಕೊಳ್ಳಲಾಗಿತ್ತು.
“ನನಗೆ ಇರುವುದು ಒಂದೆ ಹೆಜ್ಜೆ ಮತ್ತು ಆ ಹೆಜ್ಜೆಯು ಈ ದೇಶದಲ್ಲಿ ಸತ್ಯಕ್ಕಾಗಿ ಹೋರಾಟ ಮಾಡುವುದು ಹಾಗೂ ದೇಶದ ಪ್ರಜಾಪ್ರಭುತ್ವವವನ್ನು ರಕ್ಷಿಸುವುದು……..,” ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಂತೆಯೇ, ಅವರನ್ನು ಅಡ್ಡಿಪಡಿಸಲು ಮುಂದಾದ ರಾಜ್ದೀಪ್ಗೆ, “ನನಗೆ ಮಾತನಾಡಿ ಮುಗಿಸಲು ಬಿಡಿ ರಾಜ್ದೀಪ್…….. ಇಲ್ಲ ನೀವೇ ಉತ್ತರಿಸುವುದಾದರೆ……. ನೀವು ಕೆಲವೊಮ್ಮೆ ಹಾಗೆ ಮಾಡುತ್ತೀರಿ,” ಎಂದು ಕಾಂಗ್ರೆಸ್ ನಾಯಕ ಹೇಳುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷದ ಚಾನೆಲ್ಗಳ ಮೂಲಕ ನೇರ ಪ್ರಸಾರ ಕಾಣುತ್ತಿದ್ದ ವಿಡಿಯೋದಲ್ಲಿ ಮೂಡಿದೆ.
“ಪತ್ರಿಕಾ ಗೋಷ್ಠಿ ಆಯೋಜಿಸಿದ್ದು ರಾಹುಲ್ ಗಾಂಧಿ ಆದರೂ ನಾನೇಕೆ ಟ್ರೆಂಡಿಂಗ್ ಆಗುತ್ತಿದ್ದೇನೆ?” ಎಂದು ರಾಜ್ದೀಪ್ ಟ್ವೀಟ್ ಮಾಡಿದ್ದು, ಈ ಟ್ವೀಟ್ಗೆ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. “ರಾಹುಲ್ ಅವರು ರಾಜ್ದೀಪ್ರನ್ನು ಬಯಲಿಗೆ ತಂದಿದ್ದಾರೆ,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
“ರಾಜ್ದೀಪ್ ಸರ್ದೇಸಾಯಿ ಕಾಂಗ್ರೆಸ್ ಪರ ಮಾತನಾಡುತ್ತಾರೆ ಎಂದು ಜನ ಪದೇ ಪದೇ ಹೇಳುತ್ತಾರೆ. ಆದರೆ ರಾಹುಲ್ ಗಾಂಧಿ ಇದನ್ನು ಪತ್ರಿಕಾಗೋಷ್ಠಿಯಲ್ಲಿ ಹೀಗೆ ನೇರವಾಗಿ ಹೇಳಿದ್ದು ಇಷ್ಟವಾಗಲಿಲ್ಲ. ರಾಗಾ ಇಂದು ಪತ್ರಕರ್ತರನ್ನೆಲ್ಲಾ ಅವಮಾನ ಮಾಡಿದಂತೆ ಮಾತನಾಡಿದ್ದಾರೆ,” ಎಂದು ದೇಬ್ಜಾನಿ ಭಟ್ಟಾಚಾರ್ಯ ಎಂಬುವವರು ಟ್ವೀಟ್ ಮಾಡಿದ್ದಾರೆ.
ಘಟನೆಯು ಸಾಕಷ್ಟು ಮೀಮ್ಗಳಿಗೆ ಆಹಾರವಾಗಿದ್ದು, ಟ್ವಿಟರ್ನಲ್ಲಿ ಭಾರೀ ಪ್ರತಿಕ್ರಿಯೆಗಳಿಗೆ ಗ್ರಾಸವಾಗಿದೆ.