alex Certify ಪತ್ನಿ ಮನೆಯಿಂದ ಪಡೆಯುವ ಯಾವುದೇ ಬೆಲೆ ಬಾಳುವ ವಸ್ತು ವರದಕ್ಷಿಣೆಗೆ ಸಮ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಮನೆಯಿಂದ ಪಡೆಯುವ ಯಾವುದೇ ಬೆಲೆ ಬಾಳುವ ವಸ್ತು ವರದಕ್ಷಿಣೆಗೆ ಸಮ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಮನೆ ನಿರ್ಮಾಣ ಮಾಡಬೇಕೆಂದು ಪತ್ನಿಯ ಮನೆಯವರಲ್ಲಿ ಕೇಳುವ ಹಣವೂ ಸಹ ವರದಕ್ಷಿಣೆಗೆ ಸಮಾನ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಎನ್.​ವಿ. ರಮಣ , ಎ.ಎಸ್.​ ಬೋಪಣ್ಣ ಹಾಗೂ ನ್ಯಾಯಮೂರ್ತಿ ಹಿಮಾ ಕೊಹ್ಲಿಯವರನ್ನೊಳಗೊಂಡ ಪೀಠವು, ವರದಕ್ಷಿಣ ಎಂಬ ಪದಕ್ಕೆ ವಿಶಾಲ ಅರ್ಥವಿದೆ ಎಂದು ಹೇಳಿದೆ. ಹಣ, ಆಸ್ತಿ ಹೀಗೆ ಯಾವುದೇ ಬೆಲೆ ಬಾಳುವ ವಸ್ತು ಬೇಕೆಂದು ಹೆಂಡತಿಯನ್ನು ಪೀಡಿಸಿದರೂ ಸಹ ಅದು ವರದಕ್ಷಿಣೆಗೆ ಕಿರುಕುಳ ಪ್ರಕರಣದ ವ್ಯಾಪ್ತಿಯಲ್ಲಿಯೇ ಬರಲಿದೆ ಎಂದು ಹೇಳಿದೆ.

ಮೃತ ಮಹಿಳೆಯ ಬಳಿ ಆರೋಪಿಯು ನಿರಂತರವಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆಕೆಯ ಕುಟುಂಬ ಸದಸ್ಯರಿಗೆ ಹಣವನ್ನು ನೀಡಲು ಸಾಧ್ಯವಾಗಿಲ್ಲ. ವರದಕ್ಷಿಣೆಯ ಪಿಡುಗನ್ನು ಹೋಗಲಾಡಿಸಲು ನ್ಯಾಯಾಲಯವು ಒಂದು ಮಾಧ್ಯಮವಾಗಬೇಕು. ಈ ಪ್ರಕರಣದಲ್ಲಿ ಮಹಿಳೆಯು ನಿರಂತರವಾಗಿ ಕಿರುಕುಳ ಅನುಭವಿಸಿದ್ದಾರೆ. ಇದರಿಂದ ಅವರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಧ್ಯಪ್ರದೇಶ ಹೈಕೋರ್ಟ್​ ಮನೆ ನಿರ್ಮಾಣಕ್ಕೆ ಹಣ ಬೇಕೆಂದು ಬೇಡಿಕೆ ಇಟ್ಟರೆ ಅದು ವರದಕ್ಷಿಣೆ ಬೇಡಿಕೆ ಆಗುವುದಿಲ್ಲ ಎಂದು ತೀರ್ಪು ನೀಡಿತ್ತು.

ಮತ್ತೊಂದು ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಅತ್ತೆಯ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಮಹಿಳೆಯು ಮತ್ತೊಬ್ಬ ಮಹಿಳೆಯನ್ನು ಉಳಿಸದೇ ಇದ್ದರೆ ಅದೊಂದು ಗಂಭೀರ ಅಪರಾಧ ಎಂದು ಹೇಳಿದೆ. ಅಲ್ಲದೇ ಅತ್ತೆಯನ್ನು ನ್ಯಾಯಾಲಯ ದೋಷಿ ಎಂದು ಘೋಷಣೆ ಮಾಡಿದೆ ಹಾಗೂ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಮಹಿಳೆಯು ತನ್ನ ಸೊಸೆಯ ಮೇಲೆ ಇಂತಹ ಕ್ರೌರ್ಯ ತೋರಿದರೆ ಆಕೆ ಆತ್ಮಹತ್ಯೆಯ ದಾರಿ ಹಿಡಿಯಬಹುದು ಎಂದು ನ್ಯಾಯಪೀಠ ಹೇಳಿದೆ.

ಮತ್ತೊಂದು ಪ್ರಕರಣದಲ್ಲಿ, ನೋಂದಾವಣೆ ಅಧಿಕಾರಿಗಳು ಉನ್ನತ ನ್ಯಾಯಾಲಯದ ನಿಯಮಗಳನ್ನು ಚೆನ್ನಾಗಿ ತಿಳಿದಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜಾಮೀನು ಆದೇಶ ರದ್ದತಿ ವಿರುದ್ಧ ಸಲ್ಲಿಸಲಾಗಿರುವ ವಿಶೇಷ ರಜೆ ಅರ್ಜಿಯೊಂದಿಗೆ ಸುಪ್ರೀಂ ಕೋರ್ಟ್ ಈ ರೀತಿಯಾಗಿದೆ ಹೇಳಿದೆ. ಶರಣಾಗತಿಯಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಇದೇ ಪ್ರಕರಣವನ್ನು ಪರಿಗಣಿಸಿದ ನ್ಯಾಯಮೂರ್ತಿ ಪಿ.ಎಸ್. ನರಸಿಂಹ, ಇಂತಹ ಪ್ರಕ್ರಿಯೆ ಅನುಸರಿಸದಿದ್ದಲ್ಲಿ ವಿನಾಯಿತಿಗಾಗಿ ಹೆಚ್ಚಿನ ಸಂಖ್ಯೆಯ ಅರ್ಜಿಗಳು ನಿಯಮಿತವಾಗಿ ಸಲ್ಲಿಕೆಯಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...