alex Certify ಪತ್ನಿ, ಮಗನನ್ನು ಕೊಂದು ವಾಟ್ಸಾಪ್‌ ಗ್ರೂಪ್‌ನಲ್ಲಿ ಮೆಸೇಜ್‌ ಕಳಿಸಿದ ಹಂತಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ, ಮಗನನ್ನು ಕೊಂದು ವಾಟ್ಸಾಪ್‌ ಗ್ರೂಪ್‌ನಲ್ಲಿ ಮೆಸೇಜ್‌ ಕಳಿಸಿದ ಹಂತಕ

ದೆಹಲಿಯ ಗೀತಾ ಕಾಲೋನಿಯಲ್ಲಿ ಬೆಚ್ಚಿಬೀಳಿಸುವಂಥ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮಗನನ್ನು ಕೊಂದು ಈ ಬಗ್ಗೆ ಫ್ಯಾಮಿಲಿ ವಾಟ್ಸಾಪ್‌ ಗ್ರೂಪ್‌ನಲ್ಲಿ ಮೆಸೇಜ್‌ ಹಾಕಿದ್ದಾನೆ. ಕಿರಾಣಿ ಅಂಗಡಿ ನಡೆಸ್ತಾ ಇದ್ದ ಸಚಿನ್‌ ಎಂಬ ವ್ಯಕ್ತಿಯೇ ಈ ಕೃತ್ಯ ಎಸಗಿದ ಆರೋಪಿ.

ಸಚಿನ್‌ ತಾಯಿಯೇ ಖುದ್ದು ಕರೆ ಮಾಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. 35 ವರ್ಷದ ಕಂಚನ್‌ ಅರೋರಾ ಹಾಗೂ 9ನೇ ಕ್ಲಾಸ್‌ನಲ್ಲಿ ಓದ್ತಾ ಇದ್ದ ಆಕೆಯ ಮಗನ ಶವ ಎರಡನೇ ಮಹಡಿಯಲ್ಲಿತ್ತು. 40 ವರ್ಷದ ಸಚಿನ್‌, ಪತ್ನಿ ಮತ್ತು ಮಗನನ್ನೇ ಕೊಂದು ಪರಾರಿಯಾಗಿದ್ದಾನೆ.

ಹಣಕಾಸಿನ ಸಮಸ್ಯೆಯೇ ಈ ಕೃತ್ಯಕ್ಕೆ ಕಾರಣವೆಂದು ಹೇಳಲಾಗ್ತಿದೆ. ಪತ್ನಿ, ಮಗನನ್ನ ಕೊಂದ ಸಚಿನ್‌ ಮೊದಲು ಆ ಸ್ಥಳದಿಂದ ಓಡಿ ಹೋಗಿದ್ದ. ಅದಾದ್ಮೇಲೆ ಕುಟುಂಬದ ವಾಟ್ಸಾಪ್‌ ಗ್ರೂಪ್‌ನಲ್ಲಿ ತಾನು ಮಾಡಿರೋ ನೀಚ ಕೃತ್ಯದ ಬಗ್ಗೆ ಮೆಸೇಜ್‌ ಹಾಕಿದ್ದಾನೆ, ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...