ಪತ್ನಿ ಜೊತೆ ಪದೇ ಪದೇ ಜಗಳವಾಗ್ತಿದ್ದರೆ ‘ಆರ್ಥಿಕ’ ಮುಗ್ಗಟ್ಟು ನಿಶ್ಚಿತ 11-04-2022 6:40AM IST / No Comments / Posted In: Latest News, Live News, Astro ಜೀವನದಲ್ಲಿ ಗ್ರಹಗಳು ಅಶುಭ ಹಾಗೂ ಶುಭ ಫಲಗಳಿಗೆ ಕಾರಣವಾಗುತ್ತದೆ. ನಿಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡ್ರೆ ಗ್ರಹ ದೋಷಕ್ಕಾಗಿ ಪೂಜೆ, ಹೋಮ, ಹವನಗಳನ್ನು ಮಾಡುವ ಅಗತ್ಯವಿರುವುದಿಲ್ಲ. ಪತ್ನಿಗೆ ಗೌರವಕೊಡದಿರುವುದೂ ಒಂದು ದುರಭ್ಯಾಸ. ಕೆಲವರು ಪ್ರತಿದಿನ ಸಣ್ಣಪುಟ್ಟ ವಿಚಾರಕ್ಕೆ ಪತ್ನಿ ಜೊತೆ ಜಗಳ ಮಾಡ್ತಾರೆ. ಹೀಗೆ ಮಾಡೋದ್ರಿಂದ ಜಾತಕದಲ್ಲಿ ಶುಕ್ರನ ಕೆಟ್ಟ ಪ್ರಭಾವಕ್ಕೊಳಗಾಗಬೇಕಾಗುತ್ತದೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯೊಂದೇ ಅಲ್ಲ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕೆಲವೊಂದು ಗ್ರಹ ದೋಷದಿಂದಾಗಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗ್ರಹ ದೋಷಕ್ಕೆ ನೀವೇ ಕಾರಣ. ಹಾಗೆ ದೋಷ ಪರಿಹಾರವೂ ನಿಮ್ಮಿಂದ ಮಾತ್ರ ಸಾಧ್ಯ. ಜಾತಕದಲ್ಲಿ ಮಂಗಳ ಗ್ರಹ ದೋಷವಿದ್ದರೆ ಸಹೋದರ ಹಾಗೂ ಸಂಬಂಧಿಕರ ನಡುವಿನ ಸಂಬಂಧ ಸರಿಯಾಗಿರುವುದಿಲ್ಲ. ಸಹೋದರನ ಜೊತೆ ಪ್ರೀತಿಯಿಂದಿದ್ದರೆ ಮಂಗಳ ದೋಷ ನಿವಾರಣೆಯಾಗುತ್ತದೆ. ಶನಿಯ ದೋಷವಿದ್ದರೆ ನಿಮ್ಮ ನೌಕರರಿಗೆ ಗೌರವ ನೀಡುವುದನ್ನು ರೂಢಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಅವರ ವೇತನ ನೀಡುವಲ್ಲಿ ಹಿಂದೇಟು ಹಾಕಬೇಡಿ. ತಂದೆ-ತಾಯಿ, ಹಿರಿಯರ ಪೂಜೆ ಮಾಡುವುದರಿಂದ ಚಂದ್ರ ಹಾಗೂ ಸೂರ್ಯನ ಕೃಪೆಗೆ ಪಾತ್ರರಾಗುವಿರಿ. ಅಶ್ವತ್ಥ ಗಿಡ ನೆಟ್ಟು ಅದಕ್ಕೆ ಪೂಜೆ ಮಾಡುವುದರಿಂದ ಗುರು ದೋಷ ಕಡಿಮೆಯಾಗುತ್ತದೆ. ನಿಮ್ಮ ಮನೆ, ಸುತ್ತಮುತ್ತಲ ಪರಿಸರ ಸ್ವಚ್ಛವಾಗಿದ್ದರೆ ರಾಹುವಿನ ಕೆಟ್ಟ ದೃಷ್ಠಿಯಿಂದ ತಪ್ಪಿಸಿಕೊಳ್ಳಬಹುದು. ಹರಿದಿರುವ, ಹಾಳಾಗಿರುವ ಹಣವನ್ನು ಇಟ್ಟುಕೊಳ್ಳಬೇಡಿ. ಇದ್ರಿಂದ ಖರ್ಚು ಹೆಚ್ಚಾಗುತ್ತದೆ. ನಿಮಗೆ ಬಂದಿದ್ದ ಖಾಯಿಲೆ ಗುಣವಾಗಿದ್ದು ಉಳಿದ ಮಾತ್ರೆ ಹಾಗೆ ಬಿದ್ದಿದ್ದರೆ ಎಚ್ಚರ. ಮನೆಯಲ್ಲಿರುವ ಬಳಸದ ಮಾತ್ರೆಗಳಿಂದ ಮತ್ತೆ ಖಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.