ಪ್ರೇಮದ ಸ್ಮಾರಕದ ಬಗ್ಗೆ ಆಲೋಚನೆ ಬಂದಾಗೆಲ್ಲಾ ತಾಜ್ ಮಹಲ್ ನೆನಪಾಗುತ್ತದೆ. ಇದರಾಚೆಗೂ, ಅನೇಕ ವರ್ಷಗಳಿಂದಲೂ ತಮ್ಮ ಪ್ರೇಮ ಎಷ್ಟು ಆಳ ಎಂದು ತೋರಲು ತಮ್ಮದೇ ಶೈಲಿಯಲ್ಲಿ ಸ್ಮಾರಕ ಕಟ್ಟಿರುವುದನ್ನು ಕಂಡಿದ್ದೇವೆ.
ಇವರ ಸಾಲಿಗೆ ಸೇರುವ ಬೋಸ್ನಿಯಾದ 72ರ ಹರೆಯದ ವೊಜಿನ್ ಕ್ಯುಸಿಕ್ ಸ್ರ್‌ಬಾಕ್‌ನಲ್ಲಿ ತಮ್ಮ ಮಡದಿಯ ಇಷ್ಟದಂತೆ ತಿರುಗುವ ಮನೆ ಕಟ್ಟಿದ್ದಾರೆ. ಹಸಿರು ಬಣ್ಣ ಹಾಗೂ ಕೆಂಪು ಲೋಹದ ಛಾವಣಿಯ ಈ ಮನೆಯನ್ನು ವೃತ್ತಾಕಾರದಲ್ಲಿ ಸಂಪೂರ್ಣವಾಗಿ ತಿರುಗಿಸಬಹುದಾಗಿದೆ.
‘ಪುಷ್ಪ’ ಸಿನಿಮಾದ ಎರಡನೇ ಹಾಡು ರಿಲೀಸ್
ಕಿಟಕಿಯಿಂದ ಹೊರಗೆ ತನ್ನಿಚ್ಛೆಯ ದಿಕ್ಕಿನಲ್ಲಿ ನೋಡಬೇಕೆನ್ನುವ ತನ್ನ ಮಡದಿ ಲುಬಿಕಾರ ಆಸೆ ಪೂರೈಸಲು ಕ್ಯೂಸಿಕ್ ಹೀಗೆ ಮಾಡಿದ್ದಾರೆ.
“ವಯಸ್ಸು ಹೆಚ್ಚಾಗಿ ನನ್ನ ಮಕ್ಕಳು ಕೌಟುಂಬಿಕ ಉದ್ಯಮವನ್ನು ನೋಡಿಕೊಳ್ಳಲು ಆರಂಭಿಸಿದ ಬಳಿಕ, ಬೇಕೆಂದಾಗೆಲ್ಲಾ ಮನೆಯ ಕೋಣೆಗಳನ್ನು ಇಷ್ಟವಾದ ದಿಕ್ಕಿಗೆ ತಿರುಗಿಸಬೇಕೆನ್ನುವ ನನ್ನ ಮಡದಿಯ ಆಸೆ ಪೂರೈಸಲು ನನಗೆ ಸಾಕಷ್ಟು ಕಾಲಾವಕಾಶ ಸಿಕ್ಕಿದೆ,” ಎನ್ನುತ್ತಾರೆ ಕ್ಯೂಸಿಕ್.