ಮನೆಯಲ್ಲಿ ವಾಸ್ತು ದೋಷವಿದ್ರೆ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುವುದಿಲ್ಲ. ಇದ್ರ ಜೊತೆಗೆ ಅನಾರೋಗ್ಯ ಸಮಸ್ಯೆ ಮನೆಯಲ್ಲಿ ಕಾಡುತ್ತದೆ. ವಾಸ್ತು ಶಾಸ್ತ್ರದಲ್ಲಿ ಯಾವ ದೋಷ ಮನೆಯ ಮಹಿಳೆಯರ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂಬುದನ್ನು ಹೇಳಲಾಗಿದೆ. ವಂಶವೃದ್ಧಿ ಸಮಸ್ಯೆ ಕಾಡುತ್ತದೆ. ಅನೇಕ ಬಾರಿ ವೈವಾಹಿಕ ಜೀವನದ ಮೇಲೂ ವಾಸ್ತು ದೋಷ ಪ್ರಭಾವ ಬೀರುತ್ತದೆ.
ಮನೆಯ ನೀರಿನ ಮೂಲ ದಕ್ಷಿಣ ದಿಕ್ಕಿನಲ್ಲಿದ್ದರೆ ವಾಸ್ತು ದೋಷವುಂಟಾಗುತ್ತದೆ. ಇದು ಮನೆ ಮಹಿಳೆಯರ ಮೇಲೆ ಪ್ರಭಾವ ಬೀರುತ್ತದೆ. ಮಹಿಳೆಯರು ಅನಾರೋಗ್ಯದಿಂದ ಬಳಲುತ್ತಾರೆ. ಖರ್ಚು ಹೆಚ್ಚಾಗುತ್ತದೆ.
ಅಡುಗೆ ಮನೆಯಲ್ಲಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದ್ರಿಂದ ಮಹಿಳೆಯರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಸೊಂಟ ನೋವು, ಕಾಲು ನೋವು ಕಾಡುತ್ತದೆ. ಅಡುಗೆ ಮಾಡುವವರ ಹಿಂಭಾಗದಲ್ಲಿ ಬಾಗಿಲಿದ್ದರೂ ಸಮಸ್ಯೆ ಕಾಡುತ್ತದೆ.
ಮನೆಯ ಉತ್ತರ-ಪೂರ್ವ ದಿಕ್ಕಿನಲ್ಲಿ ಶೌಚಾಲಯವಿದ್ದರೆ ದೊಡ್ಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಉತ್ತರ ಪೂರ್ವ ದಿಕ್ಕಿನಲ್ಲಿ ದೇವರ ಮನೆಯಿರಬೇಕು. ಶೌಚಾಲಯವಿದ್ದರೆ ವಂಶವೃದ್ಧಿಗೆ ತೊಂದರೆಯಾಗುತ್ತದೆ. ಮನೆ ಸದಸ್ಯರ ಮಧ್ಯೆ ಒತ್ತಡ, ಭಿನ್ನಾಭಿಪ್ರಾಯ ಕಾಡುತ್ತದೆ.
ಉತ್ತರ-ಪೂರ್ವ ದಿಕ್ಕಿನಲ್ಲಿ ಮಲಗುವ ಕೋಣೆಯಿದ್ದರೆ ಒಳ್ಳೆಯದಲ್ಲ. ಇದು ಕೂಡ ಸಂತಾನ ಪ್ರಾಪ್ತಿಗೆ ಅಡ್ಡಿಯುಂಟು ಮಾಡುತ್ತದೆ.