alex Certify ಪತ್ನಿಯೊಂದಿಗೆ ಜಗಳವಾಡಿ ಪೊಲೀಸರ ಎದುರೇ ಇಲಿ ಪಾಶಾಣ ತಿಂದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯೊಂದಿಗೆ ಜಗಳವಾಡಿ ಪೊಲೀಸರ ಎದುರೇ ಇಲಿ ಪಾಶಾಣ ತಿಂದ ಪತಿ

ಹೆಂಡತಿಯೊಂದಿಗೆ ಜಗಳವಾಡಿ ಪೊಲೀಸ್ ಠಾಣೆಗೆ ಹೋಗಿ ಅಲ್ಲಿಯೇ ವಿಷ ಸೇವನೆ ಮಾಡಿದ ಘಟನೆ ಭರತ್ ಪುರ ಎಂಬಲ್ಲಿ ನಡೆದಿದೆ.

ಆಗ್ರಾದ ಇಬ್ಬರು ಸಹೋದರಿಯರನ್ನು ಭರತ್ಪುರದ ಯೋಗೇಶ್ ಮತ್ತು ಲೋಕೇಶ್ ಎಂಬ ಅಣ್ಣತಮ್ಮಂದಿರು ಮದುವೆಯಾಗಿದ್ದರು. ಕೆಲವೇ ದಿನಗಳಲ್ಲಿ ಇವರ ಸಂಸಾರದಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಜಗಳ ಆರಂಭವಾದವು.

ಮೊನ್ನೆ ಗುರುವಾರವೂ ಈ ನಾಲ್ವರ ನಡುವೆ ಜಗಳವಾಗಿದೆ. ಲೋಕೇಶನ ಹೆಂಡತಿ ಪೊಲೀಸರಿಗೆ ಫೋನ್ ಮಾಡಿ ದೂರು ನೀಡಿದ್ದರಿಂದ ಪೊಲೀಸರು ಲೋಕೇಶನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಇದೇ ರೀತಿ ನನ್ನನ್ನೂ ಅರೆಸ್ಟ್ ಮಾಡುತ್ತಾರೆಂಬ ಭೀತಿಯಿಂದ ಯೋಗೇಶ್ ನೇರವಾಗಿ ಕೊಟ್ವಾಲಿ ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಸಮ್ಮುಖದಲ್ಲಿಯೇ ಇಲಿ ಪಾಶಾಣವನ್ನು ತಿಂದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಪೊಲೀಸ್ ಠಾಣೆಗೆ ಅಳುತ್ತಲೇ ಬಂದ ಯೋಗೇಶ್, ತನಗೆ ತನ್ನ ಹೆಂಡತಿ ಮತ್ತು ಆಕೆಯ ಸಹೋದರಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಲೇ ಇಲಿ ಪಾಶಾಣವನ್ನು ಸೇವಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸೊಸೆಯಂದಿರು ತಮ್ಮ ಮಕ್ಕಳಿಗೆ ತೀವ್ರ ರೀತಿಯಾದ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅವರು ಮದುವೆಯಾದ ನಂತರ ನಮ್ಮ ಮನೆಗಳಿಗೆ ಬಂದಿಲ್ಲ ಎಂದು ಸಹೋದರರ ಪೋಷಕರು ಆರೋಪಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...