alex Certify ಪತ್ನಿಯಿದ್ದರೂ ಮತ್ತೊಬ್ಬಳೊಂದಿಗೆ ವಿವಾಹಕ್ಕೆ ಸಿದ್ದತೆ; ಮೊದಲ ಪತ್ನಿ ಬರುತ್ತಿದ್ದಂತೆ ವಧುವಿನೊಂದಿಗೆ ವರ ಪರಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯಿದ್ದರೂ ಮತ್ತೊಬ್ಬಳೊಂದಿಗೆ ವಿವಾಹಕ್ಕೆ ಸಿದ್ದತೆ; ಮೊದಲ ಪತ್ನಿ ಬರುತ್ತಿದ್ದಂತೆ ವಧುವಿನೊಂದಿಗೆ ವರ ಪರಾರಿ…!

ದಕ್ಷಿಣ ಕನ್ನಡದ ಪಣಂಬೂರಿನಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಈಗಾಗಲೇ ವಿವಾಹವಾಗಿ ಪತ್ನಿ ಇದ್ದರೂ ಸಹ ಮತ್ತೊಬ್ಬಳೊಂದಿಗೆ ವಿವಾಹವಾಗಲು ಮುಂದಾಗಿದ್ದ ವ್ಯಕ್ತಿ, ಮೊದಲ ಪತ್ನಿ ವಿವಾಹ ಸ್ಥಳಕ್ಕೆ ಬರುತ್ತಿದ್ದಂತೆ ನವವಧು ಜೊತೆ ಪರಾರಿಯಾಗಿದ್ದಾನೆ.

ಘಟನೆಯ ವಿವರ: ತೀರ್ಥಹಳ್ಳಿ ಮೂಲದ ಖಾಸಗಿ ಬಸ್ ಚಾಲಕ ಶಬರೀಶ್ ಗೆ ಈಗಾಗಲೇ ಮದುವೆಯಾಗಿದ್ದು, ಇದರ ಜೊತೆಗೆ ಮತ್ತೊಬ್ಬ ಯುವತಿಯನ್ನು ಸಹ ಪ್ರೀತಿಸುತ್ತಿದ್ದ. ಸಸಿಹಿತ್ಲು ಮೂಲದ ಯುವತಿಗೆ ಶಬರೀಶ್ ಈಗಾಗಲೇ ವಿವಾಹವಾಗಿರುವುದು ತಿಳಿದಿದ್ದರೂ ಸಹ ಆತನೊಂದಿಗೆ ವೈವಾಹಿಕ ಬದುಕಿಗೆ ಕಾಲಿಡಲು ಮುಂದಾಗಿದ್ದಳು.

ಬುಧವಾರದಂದು ಮದುವೆ ಸಿದ್ಧತೆ ನಡೆಯುತ್ತಿದ್ದು, ಹೊರಗಡೆ ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಸಲಾಗುತ್ತಿತ್ತು. ಈ ವೇಳೆ ಪತಿಯ ಮತ್ತೊಂದು ವಿವಾಹದ ಸುದ್ದಿ ತಿಳಿದ ಪತ್ನಿ ಸಭಾಂಗಣ ಪ್ರವೇಶಿಸಿ ಗಲಾಟೆ ಮಾಡಿದ್ದಾಳೆ. ಈ ವಿಚಾರ ಹೊರಗಡೆ ಇದ್ದ ಶಬರೀಶ್ ಗೊತ್ತಾಗಿದ್ದು, ಕೂಡಲೇ ಆತ ವಧು ಜೊತೆ ಕಾರಿನಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...