ಹಾಸನ : ಪತ್ನಿಯಿಂದ ದೂರವಾದ ವ್ಯಕ್ತಿಯೊಬ್ಬ ಮತ್ತೊಬ್ಬನ ಹೆಂಡತಿಗೆ ಮದುವೆಯಾಗುವಂತೆ ಪೀಡಿಸಿದ್ದಕ್ಕೆ ಕೊಲೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಘಟನೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರಿನಲ್ಲಿ ನಡೆದಿದ್ದು, ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಕುಪ್ಪಮುದ್ದನಹಳ್ಳಿಯ ರವಿ(46) ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ಈ ವ್ಯಕ್ತಿ ಬೇರೊಬ್ಬರಿಗೆ ಕರೆ ಮಾಡುತ್ತಿದ್ದ ಸಂದರ್ಭದಲ್ಲಿ ತಪ್ಪಿ ಮಹಿಳೆಯೊಬ್ಬರಿಗೆ ಕರೆ ಹೋಗಿದೆ.
ರಾಜ್ಯದಲ್ಲಿ ಸರ್ಕಾರವೇ ಇಲ್ಲ; ಅದಕ್ಕೆ ಅಧಿಕಾರಿಗಳು ಮಾತು ಕೇಳುತ್ತಿಲ್ಲ; ವ್ಯಂಗ್ಯವಾಡಿದ ಸಿದ್ದರಾಮಯ್ಯ
ಆ ನಂತರ ಮತ್ತೆ ಮತ್ತೆ ಮಹಿಳೆಯ ನಂಬರ್ ಗೆ ಕರೆ ಮಾಡಿ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಕೋಪಗೊಂಡ ಆ ಮಹಿಳೆಯ ಪತಿ, ರವಿಯನ್ನು ಮನೆಯಲ್ಲಿ ನೇಣು ಹಾಕಿ, ಆ ನಂತರ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆ ಮಹಿಳೆಯ ಪತಿ ಹೊಯ್ಸಳ ಆತನ ಸ್ನೇಹಿತರಾದ ಮಂಜ, ಶ್ರೀಜಿತ್, ಸಾಗರ ಕೊಲೆ ಮಾಡಿದವರು ಎಂದು ಗುರುತಿಸಲಾಗಿದ್ದು, ತಪ್ಪಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.