alex Certify ಪತ್ನಿಗೆ ಡಿಸ್ಕೌಂಟ್‌ ನೀಡದ್ದಕ್ಕೆ ಕೋಪ, ಸಿಟ್ಟೆಗೆದ್ದು ಇಂಥಾ ಕೆಲಸ ಮಾಡಿದ್ದಾನೆ ಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಗೆ ಡಿಸ್ಕೌಂಟ್‌ ನೀಡದ್ದಕ್ಕೆ ಕೋಪ, ಸಿಟ್ಟೆಗೆದ್ದು ಇಂಥಾ ಕೆಲಸ ಮಾಡಿದ್ದಾನೆ ಪತಿ…!

ಕೆಲವೊಮ್ಮೆ ಶಾಪಿಂಗ್‌ ಸಂದರ್ಭದಲ್ಲಿ ಅಂಗಡಿಯಾತನೊಂದಿಗೆ ಜಗಳವಾಗುವುದು ಸಾಮಾನ್ಯ. ಸರಕುಗಳ ಬೆಲೆ ವಿಚಾರಕ್ಕೆ ಗ್ರಾಹಕರು ಹಾಗೂ ಅಂಗಡಿಯಾತನ ಮಧ್ಯೆ ಜಗಳ ಏರ್ಪಡುತ್ತದೆ.

ಅಮೆರಿಕದಲ್ಲಿ ಇದೇ ವಿಚಾರ ವಿಕೋಪಕ್ಕೆ ಹೋಗಿದೆ.  ಮಹಿಳೆಯೊಬ್ಬಳು ಕೆಲವು ತಿಂಡಿಗಳು ಮತ್ತು ತಂಪು ಪಾನೀಯಗಳನ್ನು ಖರೀದಿಸಲು ಅಂಗಡಿಗೆ ಹೋಗಿದ್ದಳು. ಆಕೆಗೆ ಡಿಸ್ಕೌಂಟ್‌ ನೀಡದ ಅಂಗಡಿಯಾತ ಸಂಪೂರ್ಣ ಹಣ ಪಡೆದಿದ್ದಾನೆ.

ರಿಯಾಯಿತಿ ಕೊಡುವಂತೆ ಮಹಿಳೆ ಅಂಗಡಿ ಮಾಲೀಕನ ಬಳಿ ಜಗಳ ಮಾಡಿದ್ದಾಳೆ. ಆದರೆ ಆತ ಒಪ್ಪದೇ ಇದ್ದಿದ್ದರಿಂದ ಬರಿಗೈಲಿ ವಾಪಸ್ಸಾದ ಮಹಿಳೆ ಘಟನೆಯನ್ನೆಲ್ಲ ತನ್ನ ಗಂಡನಿಗೆ ವಿವರಿಸಿದ್ದಾಳೆ. ಆರಂಭದಲ್ಲಿ ಸುಮ್ಮನಿದ್ದ ಪತಿರಾಯ ನಂತರ ರೊಚ್ಚಿಗೆದ್ದಿದ್ದಾನೆ. ತನ್ನ ಹೆಂಡತಿಗೆ ಡಿಸ್ಕೌಂಟ್‌ ನೀಡದ ಅಂಗಡಿಯನ್ನೇ ದರೋಡೆ ಮಾಡಲು ಪ್ಲಾನ್ ಮಾಡಿದ್ದಾನೆ.

ಸಂಜೆ ವೇಳೆಗೆ ಅಂಗಡಿ ತಲುಪಿದ ಆತ ಅಲ್ಲಿದ್ದ ಕೆಲವು ಸಾಮಾನುಗಳನ್ನು ದೋಚಿದ್ದಾನೆ. ಆದರೆ ಅಂಗಡಿಯ ಉದ್ಯೋಗಿ ಆತನನ್ನು ಹಿಂಬಾಲಿಸಿ ಬಂದಿದ್ದ, ಘಟನೆಯನ್ನು ನೋಡಿದ ಆತ ಪೊಲೀಸರಿಗೂ ಮಾಹಿತಿ ನೀಡಿದ್ದಾನೆ. ಪತ್ನಿಗಾಗಿ ಅಂಗಡಿಯನ್ನೇ ಲೂಟಿ ಮಾಡಿದ ಪತಿಯ ವಿರುದ್ಧ ದರೋಡೆ ಮತ್ತು ಹಲ್ಲೆ ಪ್ರಕರಣ ದಾಖಲಿಸಿರುವ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...