ಪತಿ-ಪತ್ನಿ ನಡುವೆ ಸ್ನೇಹಿತರಂತ ಸಂಬಂಧವಿದ್ದರೆ ಆ ದಾಂಪತ್ಯ ಮತ್ತಷ್ಟು ಗಟ್ಟಿಯಾಗಿರುತ್ತದೆ. ಪರಸ್ಪರ ದಂಪತಿ ಅರ್ಥ ಮಾಡಿಕೊಳ್ಳಲು ಸ್ನೇಹ ಸಹಕಾರಿ. ಆದ್ರೆ ಸಂಶೋಧನೆಯೊಂದು ಆಶ್ಚರ್ಯಕರ ವಿಷಯವನ್ನು ಹೇಳಿದೆ. ಶೇಕಡಾ 80ರಷ್ಟು ಮಹಿಳೆಯರು ಪತಿ ಮನೆಯಲ್ಲಿಲ್ಲದ ವೇಳೆ ಹೆಚ್ಚು ಖುಷಿಯಾಗಿರುತ್ತಾರಂತೆ.
ಹಾಗಂತ ಪತ್ನಿ- ಪತಿ ಜೊತೆಗಿರುವ ಸಮಯವನ್ನು ಎಂಜಾಯ್ ಮಾಡಲ್ಲ ಎಂದಲ್ಲ. ಆದ್ರೆ ಪತಿ ಮನೆಯಲ್ಲಿದ ವೇಳೆ ಹೆಚ್ಚು ಖುಷಿಯಾಗಿರಲೂ ಒಂದು ಕಾರಣವಿದೆ.
ಗಾಸಿಪ್ ಮಾಡೋದು ಮಹಿಳೆಯರಿಗೆ ತುಂಬಾ ಇಷ್ಟ. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಪತಿ ಮನೆಯಲ್ಲಿಲ್ಲದ ವೇಳೆ ತನ್ನ ಬೆಸ್ಟ್ ಫ್ರೆಂಡ್, ಮನೆಗೆ ಕರೆಯುವ ಪತ್ನಿ ಆಕೆ ಜೊತೆ ಪಾರ್ಟಿ ಮಾಡಿ ಎಂಜಾಯ್ ಮಾಡ್ತಾಳೆ. ಒಂದಿಷ್ಟು ಗಾಸಿಪ್ ಬಗ್ಗೆ ಮಾತನಾಡಿ ಒತ್ತಡ ಕಡಿಮೆ ಮಾಡಿಕೊಳ್ತಾಳೆ.
ಕೆಲ ಮಹಿಳೆಯರಿಗೆ ನಿದ್ರೆ ಮಾಡೋದು ಬಹಳ ಇಷ್ಟ. ಪತಿ ಮನೆಯಲ್ಲಿರುವಾಗ ಕೆಲಸದ ಒತ್ತಡ, ಅದು, ಇದು ಕಾರಣಕ್ಕೆ ಸರಿಯಾಗಿ ನಿದ್ರೆ ಮಾಡಲಾಗುವುದಿಲ್ಲ. ಪತಿ ಮನೆಯಿಂದ ಹೊರಗೆ ಹೋದ ತಕ್ಷಣ ನಿದ್ರೆ ಮಾಡಿ ಸಮಯ ಕಳೆಯುತ್ತಾರೆ ಕೆಲವರು.
ಪತಿ ಮನೆಯಲ್ಲಿದ್ದರೆ ರಿಮೋಟ್ ಗಲಾಟೆ ಶುರುವಾಗುತ್ತದೆ. ಪತಿ ಮನೆಯಲ್ಲಿಲ್ಲದ ವೇಳೆ ಪತ್ನಿಗೆ ಸ್ವಾತಂತ್ರ್ಯ ಸಿಕ್ಕಂತೆ. ತನಗಿಷ್ಟವಾದ ಧಾರಾವಾಹಿಗಳನ್ನು ನೋಡಿ ಎಂಜಾಯ್ ಮಾಡ್ತಾಳೆ.
ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗಿ ಮತ್ತೆ ಅಡುಗೆ ಕೆಲಸ ಮಾಡಬೇಕೆಂಬ ಚಿಂತೆ ಕಾಡುತ್ತದೆ. ಅದೇ ಪತಿ ಕೆಲಸಕ್ಕಾಗಿ ಬೇರೆ ಊರಿಗೆ ಹೋಗಿದ್ದರೆ ಮನೆ ಕೆಲಸದ ಬಗ್ಗೆ ತಲೆಬಿಸಿ ಮಾಡಿಕೊಳ್ಳದೆ ರಿಲ್ಯಾಕ್ಸ್ ಆಗ್ತಾಳೆ.