![](https://kannadadunia.com/wp-content/uploads/2020/12/1470715249IMG_1236.jpg)
ಮದುವೆಯಾದ ಹೆಣ್ಣುಮಕ್ಕಳಿಗೆ ಮೊದಲಿಗೆ ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಆದರೆ ಬಳಿಕ ಅವರು ಪತಿ, ಪತಿಯ ಕುಟುಂಬ ಸದಸ್ಯರ ಜೊತೆ ಹೊಂದಿಕೊಂಡು ಉತ್ತಮ ಜೀವನ ಸಾಗಿಸುತ್ತಾರೆ.
ಆದರೆ ಕೆಲವು ಹೆಣ್ಣು ಮಕ್ಕಳಿಗೆ ಎಷ್ಟೇ ವರ್ಷವಾದರೂ ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಪತಿ, ಅತ್ತೆ, ಮಾವನ ಜೊತೆಗಿನ ಬಾಂಧವ್ಯ ಸರಿಯಾಗಿರುವುದಿಲ್ಲ. ಅಂತವರು ಸಮಸ್ಯೆಯನ್ನು ನಿವಾರಿಸಲು ಈ ಪರಿಹಾರ ಮಾಡಿ.
ಮಹಿಳೆಯರು ಪತಿಯ ಮನೆಯಲ್ಲಿ ಮಂಗಳಗೌರಿಯ ಪೂಜೆ ಮಾಡಿ ಮನೆಗೆ 5 ಜನ ಮುತೈದೆಯರನ್ನು ಕರೆದು ಅವರಿಗೆ ಗಾಜಿನ ಬಳೆಗಳನ್ನು ತೊಡಿಸಿ ಅವರನ್ನು ಸಂತೋಷಗೊಳಿಸಿ. ಇದರಿಂದ ಮಂಗಳಗೌರಿಯ ಜೊತೆಗೆ ಮುತೈದೆಯರ ಆಶೀರ್ವಾದ ನಿಮಗೆ ದೊರೆತು ನಿಮ್ಮ ದೋಷಗಳೆಲ್ಲಾ ಕಳೆದು ನಿಮ್ಮವರ ಜೊತೆಗಿನ ನಿಮ್ಮ ಬಾಂಧವ್ಯ ಗಟ್ಟಿಯಾಗುತ್ತದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ.