ಇಂಟರ್‌ನೆಟ್‌ನಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅಂಥದ್ದೇ ವಿಡಿಯೋ ಒಂದು ಜಾಲತಾಣಗಳಲ್ಲೀಗ ಸುದ್ದಿ ಮಾಡ್ತಾ ಇದೆ. ಇದನ್ನು ನೋಡಿ ನಗೋದು ಮಾತ್ರವಲ್ಲ, ಗಂಡ-ಹೆಂಡತಿ ಹೀಗೂ ಇರ್ತಾರಾ ಅಂತ ನೀವು ಆಶ್ಚರ್ಯಪಡೋದ್ರಲ್ಲಿ ಅನುಮಾನವೇ ಇಲ್ಲ.
ಪತಿ-ಪತ್ನಿ ಮಧ್ಯೆ ಜಗಳ ಕಾಮನ್. ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಮಾತಿದೆ. ಕೆಲವೊಮ್ಮೆ ಈ ಗಾದೆ ಸುಳ್ಳಾದ್ರೂ ಆಗ್ಬಹುದು. ಜಗಳವಾದಾಗ ಹೆಚ್ಚೆಂದರೆ ಪರಸ್ಪರರು ಮಾತು ಬಿಟ್ಟುಕೊಂಡು, ಮೌನಕ್ಕೆ ಶರಣಾಗ್ತಾರೆ.
ಆದ್ರೆ ಈ ವಿಡಿಯೋದಲ್ಲಿ ಪತಿ-ಪತ್ನಿ ಜಗಳ ಬೇರೊಂದು ಹಂತಕ್ಕೆ ತಲುಪಿದೆ. ಪತಿಯ ಜೊತೆ ಕಿತ್ತಾಡಿಕೊಂಡ ಮಹಿಳೆ ಕೋಪದಲ್ಲಿ ಹಾಸಿಗೆ ಮೇಲೆ ಇಟ್ಟಿಗೆ ಗೋಡೆಯನ್ನೇ ಕಟ್ಟಿದ್ದಾಳೆ. ಇಟ್ಟಿಗೆ ಹಾಗೂ ಸಿಮೆಂಟ್ ತಂದಿಟ್ಟುಕೊಂಡು ಮಹಿಳೆ ಖುದ್ದಾಗಿ ಗೋಡೆ ಕಟ್ತಾ ಇರೋ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪತ್ನಿ ಮಾಡ್ತಿರೋ ಕೆಲಸ ನೋಡಿ ಗಂಡನಿಗೆ ಒಂದ್ಕಡೆ ಆಶ್ಚರ್ಯ, ಇನ್ನೊಂದ್ಕಡೆ ಭಯ. ಆತ ಮೌನವಾಗಿ ಕೈಕಟ್ಟಿಕೊಂಡು ಪತ್ನಿಯ ಕರಾಮತ್ತನ್ನು ನೋಡುತ್ತ ಕುಳಿತಿದ್ದಾನೆ. ಈ ಫನ್ನಿ ವಿಡಿಯೋವನ್ನು rising.teching ಹೆಸರಿನ Instagram ಖಾತೆಯಲ್ಲಿ ಶೇರ್ ಮಾಡಲಾಗಿದೆ.
ವಿಡಿಯೋ ನೋಡಿದವರೆಲ್ಲ ಬಗೆಬಗೆಯಾಗಿ ಕಮೆಂಟ್ ಮಾಡ್ತಿದ್ದಾರೆ. ಹಾಸಿಗೆಯಲ್ಲಿ ಗೋಡೆ ಕಟ್ಟುವ ಬದಲು ಇಬ್ಬರೂ ಒಮ್ಮೆ ಮಾತನಾಡಿ ಜಗಳ ಬಗೆಹರಿಸಿಕೊಳ್ಳಿ ಅಂತ ಕೆಲವರು ಸಲಹೆ ನೀಡಿದ್ದಾರೆ. ‘ಗಂಡ ಹೆಂಡತಿ ನಡುವಿನ ಜಗಳಕ್ಕೆ ಆಧುನಿಕ ಪರಿಹಾರ’ ಎಂದು ಮತ್ತೋರ್ವ ಕಮೆಂಟ್ ಹಾಕಿದ್ದಾನೆ.