ಅಮವಾಸ್ಯೆಯನ್ನು ಭೀಮನ ಅಮವಾಸ್ಯೆಯಾಗಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಜುಲೈ28 ರ ಗುರುವಾರ ಈ ಅಮವಾಸ್ಯೆ ಆಚರಿಸಲಾಗುತ್ತಿದೆ.
ಮಹಿಳೆಯರು ಆಚರಿಸುವಂತಹ ಹಬ್ಬ ಇದು. ಮದುವೆಯಾದವರು ಗಂಡನ ಆಯಸ್ಸು, ಯಶಸ್ಸಿಗೆ ವೃತ ಮಾಡಿದ್ರೆ, ಅವಿವಾಹಿತರು ಒಳ್ಳೆ ಪತಿಗಾಗಿ ವೃತ ಮಾಡ್ತಾರೆ. ಸಂಪ್ರದಾಯಬದ್ಧವಾಗಿ ಸಂಜೀವಿನ ವೃತ ಮಾಡುವವರು 16 ವರ್ಷಗಳ ಕಾಲ ಈ ವೃತ ಮಾಡಬೇಕಾಗುತ್ತದೆ.
ಭೀಮನ ಅಮವಾಸ್ಯೆಯಂದು ಶಿವ-ಪಾರ್ವತಿ ಮದುವೆಯಾಗಿದ್ದಾರೆಂಬ ನಂಬಿಕೆಯಿದೆ. ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಇದನ್ನು ಬೇರೆ ಬೇರೆಯಾಗಿ ಆಚರಿಸಲಾಗುತ್ತದೆ.
ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು. ಕಲ್ಯಾಣಿಯಲ್ಲಿ ಮೂರು ಬಾರಿ ಮುಳುಗಿ ಎದ್ದರೂ ಯಶಸ್ಸು ನಿಮ್ಮದಾಗುತ್ತದೆ ಎಂದು ನಂಬಲಾಗಿದೆ. ಸ್ನಾನದ ನಂತ್ರ ನಿಮ್ಮ ಮನೆ ದೇವರ ದರ್ಶನ ಮಾಡಬೇಕು. ನಂತ್ರ ವೃತ ಶುರು ಮಾಡಬೇಕು. ಆಷಾಢದಲ್ಲಿ ಗಂಡನನ್ನು ಬಿಟ್ಟು ತವರಿಗೆ ಹೋಗುವ ಪತ್ನಿ ಈ ದಿನ ಮತ್ತೆ ಬಂದು ಗಂಡನ ಪಾದ ಪೂಜೆ ಮಾಡಿ ಮತ್ತೆ ಜೀವನ ಶುರು ಮಾಡುತ್ತಾಳೆ.