ಮಾಡೆಲ್, ನಟಿ ಪೂನಂ ಪಾಂಡೆ ತನ್ನ ಪತಿ ಸ್ಯಾಮ್ ಬಾಂಬೆಯಿಂದ ಈಗಾಗಲೇ ಬೇರ್ಪಟ್ಟಿದ್ದಾರೆ. ಆದರೆ, ಆಕೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಹಾಗಿನ ಪ್ರೇಮಕಥೆಯನ್ನು ಬಯಸುತ್ತಾರಂತೆ.
ದೈಹಿಕ ಹಲ್ಲೆಯ ದೂರು ದಾಖಲಿಸಿದ ನಂತರ ಸ್ಯಾಮ್ ಅವರನ್ನು ಇತ್ತೀಚೆಗೆ ಬಂಧಿಸುವುದರೊಂದಿಗೆ ಪೂನಂ-ಸ್ಯಾಮ್ ವಿವಾಹವು ಕೊನೆಗೊಂಡಿದೆ. ಇದೀಗ ಸಂದರ್ಶನವೊಂದರಲ್ಲಿ ತನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಪೂನಂ, ತಾನೀಗ ಯಾವುದೇ ಪ್ರೀತಿಯನ್ನು ಹುಡುಕುತ್ತಿಲ್ಲ. ಆದರೆ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರಂತಹ ಪ್ರೇಮಕಥೆ ಕೇಳಿ ತನ್ನ ಮನವೂ ಹಂಬಲಿಸುತ್ತಿರುವುದಾಗಿ ಪೂನಂ ತಿಳಿಸಿದ್ದಾರೆ.
ಕತ್ರಿನಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಪೂನಂ ಅವರೇ ತನ್ನ ಸ್ಫೂರ್ತಿ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಕತ್ರೀನಾ ಕೈಫ್ ರೀತಿ ಇರಲು ಬಯಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಕತ್ರಿನಾ ಮತ್ತು ವಿಕ್ಕಿಯ ವಿವಾಹದ ಬಗ್ಗೆ ಮಾತನಾಡುತ್ತಾ, ತಾನು ಅವರಂತೆಯೇ ಪ್ರೀತಿಯನ್ನು ಕಂಡುಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ.
ಸ್ಯಾಮ್ ಜೊತೆಗಿನ ಪ್ರತ್ಯೇಕತೆಯ ನಂತರ ತನ್ನ ಮಾನಸಿಕ ಆರೋಗ್ಯವು ಹೇಗೆ ಹದಗೆಟ್ಟಿತು ಎಂಬುದನ್ನು ವಿವರಿಸಿರುವ ಪೂನಂ, ಅದಕ್ಕಾಗಿಯೇ ತಾನು ಚಿಕಿತ್ಸಾ ಅವಧಿಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.