ಇಸ್ಲಾಮಾಬಾದ್: ಗಂಡನನ್ನು ಸ್ಪೇನ್‌ಗೆ ಕರೆದೊಯ್ಯಲು ವಿಫಲರಾದ ಇಬ್ಬರು ಪಾಕಿಸ್ತಾನಿ ಮಹಿಳೆಯರಿಗೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಲಾಗಿದೆ. ಪಂಜಾಬ್ ಪ್ರಾಂತ್ಯದಿಂದ ಈ ದುಷ್ಕೃತ್ಯ ವರದಿಯಾಗಿದೆ. ಈ ಇಬ್ಬರು ಮಹಿಳೆಯರು ಸಹೋದರಿಯರಾಗಿದ್ದು, ಸ್ಪೇನ್ ದೇಶದ ಪ್ರಜೆಗಳು.
ಮೃತ ಸಹೋದರಿಯರನ್ನು ಆರೂಜ್ ಅಬ್ಬಾಸ್ ಮತ್ತು ಅನೀಸಾ ಅಬ್ಬಾಸ್ ಎಂದು ಗುರುತಿಸಲಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುಜರಾತ್ ಜಿಲ್ಲೆಯ ನಾಥಿಯಾ ಗ್ರಾಮ ಇವರ ತವರು. ಈ ಇಬ್ಬರು ಮಹಿಳೆಯರು ಸೋದರ ಸಂಬಂಧಿಗಳನ್ನೇ ವಿವಾಹವಾಗಿದ್ದರು.
ತಮ್ಮ ಪತಿಯರಿಗೆ ಸ್ಪೇನ್ ವೀಸಾ ದೊರಕಿಸಿಕೊಡುವಲ್ಲಿ ಇಬ್ಬರೂ ವಿಫಲರಾಗಿದ್ದರು. ಹೀಗಾಗಿ ಚಿತ್ರಹಿಂಸೆ ನೀಡಿ, ಕೊನೆಗೆ ಗುಂಡಿಟ್ಟು ಕೊಲೆ ಮಾಡಲಾಗಿದೆ.
ಪೊಲೀಸರು ನೀಡಿದ ಪ್ರಾಥಮಿಕ ಮಾಹಿತಿ ಪ್ರಕಾರ, ಸಹೋದರಿಯರು ಒಂದು ವರ್ಷದ ಹಿಂದೆ ಪಾಕಿಸ್ತಾನದಲ್ಲಿರುವ ತಮ್ಮ ಸೋದರ ಸಂಬಂಧಿಗಳೊಂದಿಗೆ ಮದುವೆಯಾಗಿದ್ದರು. ಆದರೆ, ವೈವಾಹಿಕ ಬಂಧ ಸಮಾಧಾನಕರವಾಗಿರಲಿಲ್ಲ.
ಪಿಎಸ್‌ಐ ನೇಮಕ ಹಗರಣ ಎಫೆಕ್ಟ್: ಪರೀಕ್ಷಾರ್ಥಿಗಳ ಕಿವಿ ಪರೀಕ್ಷಿಸಿದ ENT ತಜ್ಞರು
ಹತ್ಯೆ ನಡೆದ ವೇಳೆ ಮನೆಯಲ್ಲಿದ್ದ ಮಹಿಳೆಯ ತಾಯಿ ಅಜ್ರಾ ಬೀಬಿ, ಪಾಕಿಸ್ತಾನಕ್ಕೆ ಹಿಂದಿರುಗಿದ ತನ್ನ ಹೆಣ್ಣುಮಕ್ಕಳು ತಮ್ಮ ಗಂಡನೊಂದಿಗೆ ವಾಸಿಸಲು ನಿರಾಕರಿಸಿದ್ದರು. ಹೀಗಾಗಿ ನನ್ನ ಸಹೋದರ ಹನೀಫ್ ಮತ್ತು ನನ್ನ ಹೆಣ್ಣುಮಕ್ಕಳ ಗಂಡಂದಿರು ಅವರನ್ನು ತೀವ್ರವಾಗಿ ಹೊಡೆದು ಗುಂಡಿಕ್ಕಿ ಕೊಂದರು. ನಾನು ಅವರ ಪ್ರಾಣವನ್ನು ಉಳಿಸಿಕೊಳ್ಳುವಂತೆ ಅವರನ್ನು ಬೇಡಿಕೊಂಡರೂ ಕೇಳಲಿಲ್ಲ” ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಅಪರಾಧದಲ್ಲಿ ಭಾಗಿಯಾಗಿರುವ ಶಂಕಿತರನ್ನು ಬಂಧಿಸಲು ಪೊಲೀಸರು ಶೋಧ ನಡೆಸಿದ್ದಾರೆ.