alex Certify ಪಣಜಿಯಲ್ಲಿ ಕೈ ತಪ್ಪಿದ ಪಕ್ಷದ ಟಿಕೆಟ್​: ಬಿಜೆಪಿಗೆ ರಾಜೀನಾಮೆ ನೀಡಿದ ಮನೋಹರ್​ ಪರಿಕ್ಕರ್​ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಣಜಿಯಲ್ಲಿ ಕೈ ತಪ್ಪಿದ ಪಕ್ಷದ ಟಿಕೆಟ್​: ಬಿಜೆಪಿಗೆ ರಾಜೀನಾಮೆ ನೀಡಿದ ಮನೋಹರ್​ ಪರಿಕ್ಕರ್​ ಪುತ್ರ

ಗೋವಾ ಮಾಜಿ ಸಿಎಂ ದಿವಂಗತ ಮನೋಹರ್​ ಪರಿಕ್ಕರ್​ ಅವರ ಪುತ್ರ ಉತ್ಪಲ್​ ಪರಿಕ್ಕರ್​ ಬಿಜೆಪಿಯನ್ನು ತ್ಯಜಿಸಿದ್ದಾರೆ. ಪಣಜಿ ಕ್ಷೇತ್ರದಿಂದ ಟಿಕೆಟ್​ ಸಿಗೋದಿಲ್ಲ ಎಂದು ತಿಳಿದು ಬಿಜೆಪಿ ಬಗ್ಗೆ ಅಸಮಾಧಾನ ಹೊಂದಿದ್ದ ಉತ್ಪಲ್​ ಪಕ್ಷ ತ್ಯಜಿಸಿದ್ದಾರೆ.

 

ಪಣಜಿ ಕ್ಷೇತ್ರದಲ್ಲಿ ತಾವು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದಾಗಿ ಉತ್ಪಲ್​​ ಪರಿಕ್ಕರ್​ ಇದೇ ವೇಳೆ ಘೋಷಣೆ ಮಾಡಿದ್ದಾರೆ.

ಬಿಜೆಪಿಯು ಪಣಜಿ ಕ್ಷೇತ್ರದಿಂದ ಶಾಸಕ ಅಟಾನ್ಸಿಯೋ ಮೊನ್ಸರೇಟ್​​ಗೆ ಟಿಕೆಟ್​ ನೀಡುವುದಾಗಿ ಹೇಳಿತ್ತು. ಮನೋಹರ್​ ಪರಿಕ್ಕರ್​ ಅನೇಕ ವರ್ಷಗಳಿಂದ ಸ್ಪರ್ಧಿಸಿದ್ದ ಪಣಜಿ ಕ್ಷೇತ್ರದಲ್ಲಿ ಪ್ರಸ್ತುತ ಅಟಾನ್ಸಿಯೋ ಮೊನ್ಸರೇಟ್​​ ಶಾಸಕರಿದ್ದಾರೆ.

ನನ್ನ ಬಳಿ ಸದ್ಯ ಬೇರೆ ಯಾವುದೇ ಆಯ್ಕೆಗಳಿಲ್ಲ. ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೆನೆ ಅಲ್ಲದೇ ನಾನು ಪಣಜಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಉತ್ಪಲ್​ ಪರಿಕ್ಕರ್​ ಹೇಳಿದ್ದಾರೆ.

ನಾನು ಅಧಿಕೃತವಾಗಿ ಬಿಜೆಪಿಗೆ ರಾಜೀನಾಮೆ ನೀಡಿದ್ದರೂ ಸಹ ಬಿಜೆಪಿ ಎಂದಿಗೂ ನನ್ನ ಹೃದಯದಲ್ಲಿ ಇರುತ್ತದೆ ಎಂದು ಉತ್ಪಲ್​ ಪರಿಕ್ಕರ್​ ಹೇಳಿದ್ದಾರೆ.

ಇದು ನನ್ನ ಪಾಲಿಗೆ ಅತ್ಯಂತ ಕಷ್ಟಕರ ಆಯ್ಕೆಯಾಗಿದೆ. ನಾನು ಗೋವಾದ ಜನತೆಗಾಗಿ ಇವೆಲ್ಲವನ್ನೂ ಮಾಡುತ್ತಿದ್ದೇನೆ. ನನ್ನ ರಾಜಕೀಯ ಭವಿಷ್ಯದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅದರ ಬಗ್ಗೆ ಚಿಂತಿಸಲು ಗೋವಾದ ಜನತೆ ಇದ್ದಾರೆ ಎಂದು ಉತ್ಪಲ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...