ಪಡಿತರ ಚೀಟಿ ಇದ್ದವರಿಗೆ ಸರ್ಕಾರದ ವಿಶೇಷ ಯೋಜನೆ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯಡಿ ಪಡಿತರ ಸಿಗಲಿದೆ. ಕೊರೊನಾ ಕಾರಣದಿಂದಾಗಿ ಬಡವರಿಗೆ ಉಚಿತ ಪಡಿತರ ನೀಡುವುದಾಗಿ ಸರ್ಕಾರ ಘೋಷಿಸಿತ್ತು.
ಅನೇಕ ರಾಜ್ಯಗಳು ತಮ್ಮ ನಾಗರಿಕರಿಗೆ ಉಚಿತ ಪಡಿತರವನ್ನು ನೀಡುತ್ತಿವೆ. ಈಗ್ಲೂ ನಿಮ್ಮ ಬಳಿ ಪಡಿತರ ಚೀಟಿ ಇಲ್ಲವೆಂದ್ರೆ ಚಿಂತಿಸುವ ಅಗತ್ಯವಿಲ್ಲ. ಸ್ಮಾರ್ಟ್‌ಫೋನ್‌ನಿಂದ ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ನೀವು ಮೊದಲು ರಾಜ್ಯದ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು. ನಂತ್ರ Apply online for ration card ಮೇಲೆ ಕ್ಲಿಕ್ ಮಾಡಬೇಕು. ಪಡಿತರ ಚೀಟಿ ಪಡೆಯಲು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಆರೋಗ್ಯ ಕಾರ್ಡ್, ಚಾಲನಾ ಪರವಾನಗಿ ಇತ್ಯಾದಿಗಳನ್ನು ಐಡಿ ಪುರಾವೆಯಾಗಿ ನೀಡಬಹುದು. ಪಡಿತರ ಚೀಟಿಗಾಗಿ ಅರ್ಜಿ ಶುಲ್ಕ 5 ರೂಪಾಯಿಯಿಂದ 45 ರೂಪಾಯಿವರೆಗೆ ಇರುತ್ತದೆ. ಅರ್ಜಿಯನ್ನು ಭರ್ತಿ ಮಾಡಿದ ನಂತರ, ಶುಲ್ಕವನ್ನು ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ಅಧಿಕಾರಿಗಳು ಪರಿಶೀಲನೆಯ ನಂತರ ನಿಮ್ಮ ಅಪ್ಲಿಕೇಷನ್ ಸರಿಯಾಗಿದ್ದಲ್ಲಿ ಪಡಿತರ ಚೀಟಿ ನೀಡುತ್ತಾರೆ.
ಭಾರತದ ಪ್ರಜೆಯಾಗಿರುವ ವ್ಯಕ್ತಿಯು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಹೆಸರನ್ನು ಪೋಷಕರ ಪಡಿತರ ಚೀಟಿಯಲ್ಲಿ ಸೇರಿಸಲಾಗುತ್ತೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಸರ್ಕಾರ ನೀಡುವ ಯಾವುದೇ ಗುರುತಿನ ಚೀಟಿ, ಆರೋಗ್ಯ ಕಾರ್ಡ್, ಚಾಲನಾ ಪರವಾನಗಿಯನ್ನು ಪಡಿತರ ಚೀಟಿ ತಯಾರಿಸಲು ಗುರುತಿನ ದಾಖಲೆಯಾಗಿ ನೀಡಬಹುದು. ಪಾನ್ ಕಾರ್ಡ್, ಪಾಸ್ಪೋರ್ಟ್ ಗಾತ್ರದ ಫೋಟೋ, ಆದಾಯದ ಪ್ರಮಾಣಪತ್ರ, ವಿದ್ಯುತ್ ಬಿಲ್, ಗ್ಯಾಸ್ ಸಂಪರ್ಕ ಪುಸ್ತಕ, ದೂರವಾಣಿ ಬಿಲ್, ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಪಾಸ್ಬುಕ್, ಬಾಡಿಗೆ ಒಪ್ಪಂದದಂತಹ ದಾಖಲೆಗಳು ವಿಳಾಸದ ಪುರಾವೆಯಾಗಿ ಅಗತ್ಯವಿದೆ.