ಪಡಿತರ ಚೀಟಿ ಹೊಂದಿರುವವರಿಗೆ ಬಹುಮುಖ್ಯ ಮಾಹಿತಿಯೊಂದು ಇಲ್ಲಿದೆ. ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು ಜೂನ್ 30 ಇದಕ್ಕೆ ಕೊನೆಯ ದಿನಾಂಕವಾಗಿದೆ.
ಉದ್ಯೋಗ ನಿಮಿತ್ತ ಹೊರ ಜಿಲ್ಲೆ ಅಥವಾ ಹೊರ ತಾಲೂಕುಗಳಲ್ಲಿ ವಾಸಿಸುತ್ತಿರುವ ಪಡಿತರದಾರರಿಗೆ ಪೋರ್ಟಬಲಿಟಿ ಅಡಿಯಲ್ಲಿ ತಾವು ಪಡಿತರ ಪಡೆಯುತ್ತಿರುವ ನ್ಯಾಯಬೆಲೆ ಅಂಗಡಿಗಳಲ್ಲಿಯೇ ಇ-ಕೆವೈಸಿ ಮಾಡಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಅಲ್ಲದೇ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಪೌಷ್ಟಿಕಾಂಶವುಳ್ಳ ಸಾರ ವರ್ಧಿತ ಅಕ್ಕಿ ನೀಡಲಾಗುತ್ತಿದ್ದು, ಯಾವುದೇ ಗೊಂದಲಕ್ಕೊಳಗಾದೆ ಇದನ್ನು ಪಡೆದುಕೊಂಡು ಬಳಸುವಂತೆ ಕೋರಲಾಗಿದೆ.