ಮೂಕ ಪ್ರಾಣಿಗಳ ಎದುರು ಪಟಾಕಿಗಳನ್ನು ಸಿಡಿಸಲೇಬಾರದು. ಈ ರೀತಿ ಮಾಡುವುದರಿಂದ ಅವುಗಳು ಬೆಚ್ಚಿ ಬೀಳುತ್ತವೆ. ಅದರಲ್ಲೂ ಈ ಮದುವೆ ದಿನಗಳಲ್ಲಿ ಕುದುರೆ ಸವಾರಿ ಮಾಡಿ ಬರುವವರು ಈ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಇದು ಬಹುದೊಡ್ಡ ಅನಾಹುತವನ್ನೇ ಉಂಟು ಮಾಡುವ ಸಾಧ್ಯತೆ ಇರುತ್ತದೆ.
ಮದುವೆ ಮೆರವಣಿಗೆ ಆರಂಭವಾದ ಸಂದರ್ಭದಲ್ಲಿ ಜೋರಾಗಿ ಸಂಗೀತ ವಾದ್ಯಗಳನ್ನು ನುಡಿಸಿದ ಭರಕ್ಕೆ ಆ ಕುದುರೆ ಬೆಚ್ಚಿ ಬಿದ್ದಿತ್ತು. ಆದರೆ ಇದು ಸಾಲದು ಎಂಬಂತೆ ಮೆರವಣಿಗೆಯಲ್ಲಿ ಭಾಗಿಯಾದವರು ಪಟಾಕಿಯನ್ನೂ ಸಿಡಿಸಿದ್ದಾರೆ. ಇದರಿಂದ ಇನ್ನಷ್ಟು ಆತಂಕಕ್ಕೆ ಒಳಗಾದ ಕುದುರೆಯು ವರ ತನ್ನ ಮೇಲೆ ಕುಳಿತಿರುವಾಗಲೇ ಮೆರವಣಿಗೆ ಸ್ಥಳದಿಂದ ಕಾಲ್ಕಿತ್ತಿದೆ.
ಯರ್ರಾಬಿರ್ರಿ ಓಡುತ್ತಿದ್ದ ಕುದುರೆಯನ್ನು ಹಿಡಿಯಲು ಅದನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯೂ ಓಡಿದ್ದಾನೆ. ಆದರೆ ಕುದುರೆ ಮಾತ್ರ ವರನ ಸಮೇತ ಮೆರವಣಿಗೆ ಸ್ಥಳದಿಂದ ತನ್ನ ಮನೆಗೆ ಓಡಿ ಹೋಗಿದೆ. ಅಲ್ಲಿ ನೆರೆದಿದ್ದ ಎಲ್ಲರೂ ಇದರಿಂದ ಆತಂಕಕ್ಕೆ ಒಳಗಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.