ಸಾಮಾಜಿಕ ಜಾಲತಾಣದಲ್ಲಿ ಸದಾ ವಿಭಿನ್ನ, ವಿಶಿಷ್ಟ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ಖಂಡಿತಾ ನಿಮ್ಮ ಹೃದಯ ಗೆಲ್ಲುತ್ತದೆ.
ಹೌದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಚಮ್ಮಾರನೊಬ್ಬ ತನ್ನ ಅಂಗಡಿಯ ಮುಂದೆ ಕುಳಿತಿರುವ ದೃಶ್ಯವನ್ನು ನೋಡಬಹುದು. ನೀವು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ಅಂಗಡಿಯ ಪಕ್ಕದಲ್ಲಿ ಹಲವಾರು ಪಕ್ಷಿಗಳು ಸಾಲುಗಟ್ಟಿರುವುದನ್ನು ನೋಡಬಹುದು. ನಂತರ ಅವರು ಬೇಳೆಕಾಳುಗಳ ದೊಡ್ಡ ಪ್ಯಾಕೆಟ್ ಅನ್ನು ತೆಗೆದುಕೊಂಡು ಹಕ್ಕಿಗಳ ಬಳಿ ಇರಿಸುತ್ತಾರೆ. ಈ ವೇಳೆ ಒಮ್ಮೆಲೇ ಮುಗಿಬಿದ್ದ ಪಕ್ಷಿಗಳು ಕಾಳುಗಳನ್ನು ತಿನ್ನಲು ಶುರುಮಾಡಿವೆ.
ಹಕ್ಕಿಗಳು ಕಾಳುಗಳನ್ನು ತಿನ್ನುತ್ತಿದ್ದರೆ, ಚಮ್ಮಾರ ನೆಮ್ಮದಿಯ ನಗೆ ಬೀರಿದ್ದಾರೆ. ಚಮ್ಮಾರನ ಈ ಹೃದಯಸ್ಪರ್ಶಿ ಕೆಲಸ ಇಂಟರ್ನೆಟ್‌ನ ಹೃದಯವನ್ನು ಗೆದ್ದಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಬಳಕೆದಾರ ಎಂಡಿ ಉಮ್ಮರ್ ಹುಸೇನ್ ಹಂಚಿಕೊಂಡಿದ್ದು, 2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಅಂದಹಾಗೆ, ವಿಡಿಯೋವನ್ನು ಸರಿಯಾಗಿ ಗಮನಿಸಿದರೆ, ಆ ವ್ಯಕ್ತಿ ಪ್ರತಿದಿನ ಪಕ್ಷಿಗಳಿಗೆ ಆಹಾರ ನೀಡುತ್ತಾನೆ ಎಂದು ತೋರುತ್ತದೆ. ಏಕೆಂದರೆ ಆತ ಆಹಾರ ನೀಡುವ ಮುನ್ನವೇ ಪಕ್ಷಿಗಳು ಆಹಾರಕ್ಕಾಗಿ ಕಾಯುತ್ತಾ ಕುಳಿತಿವೆ. ಈ ವಿಡಿಯೋ ನಮಗೆ ಮಿಲಿಯನ್ ಡಾಲರ್ ಪಾಠ ಕಲಿಸುತ್ತದೆ. ಈ ಸಣ್ಣ ದಯೆಯ ಕಾರ್ಯಗಳನ್ನು ಮಾಡಲು ನೀವು ಮಿಲಿಯನೇರ್ ಆಗಬೇಕಾಗಿಲ್ಲ ಅಲ್ವಾ…… ಹಣದಲ್ಲಿ ಬಡತನ ಇರಬಹುದು ಆದರೆ, ದಯೆ, ಕರುಣೆ, ಸಹಾಯ ಮಾಡುವಲ್ಲಿ ಯಾರು ಬಡವರಾಗಲು ಸಾಧ್ಯವಿಲ್ಲ.