alex Certify ಪಂದ್ಯ ಸೋತರೂ ಮಾನವೀಯತೆ ಮೆರೆದು ಎಲ್ಲರ ಹೃದಯ ಗೆದ್ದ ಆಟಗಾರ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂದ್ಯ ಸೋತರೂ ಮಾನವೀಯತೆ ಮೆರೆದು ಎಲ್ಲರ ಹೃದಯ ಗೆದ್ದ ಆಟಗಾರ್ತಿ..!

ವಿಂಬಲ್ಡನ್ ನಲ್ಲಿ ಆಟಗಾರ್ತಿ ಬರ್ರೇಜ್ ಅವರು ಪ್ರೇಕ್ಷಕರಿಗೆ ತಾನು ಪ್ರತಿಕೂಲತೆಗೂ ತ್ವರಿತವಾಗಿ ಪ್ರತಿಕ್ರಿಯಿಸಬಹುದು ಎನ್ನುವುದನ್ನು ನಿರೂಪಿಸಿದರು.

ಸೋಮವಾರದ ಪಂದ್ಯದ ವೇಳೆ ಅಸ್ವಸ್ಥತೆ ಅನುಭವಿಸುತ್ತಿದ್ದ ಬಾಲ್‌ಬಾಯ್ ಅನ್ನು ಬ್ರಿಟಿಷ್ ಆಟಗಾರ್ತಿ ಗಮನಿಸಿದ್ದಾರೆ. ಕೂಡಲೇ ಆಟವನ್ನು ಸ್ಥಗಿತಗೊಳಿಸಿ ಆತನತ್ತ ಧಾವಿಸಿದ್ದಾರೆ.

ಹೌದು, ಮೂರ್ಛೆ ಹೋಗುತ್ತಿದ್ದ ಬಾಲ್ ಬಾಯ್ ನನ್ನು ಗಮನಿಸಿ ಆಟಗಾರ್ತಿ ಪಂದ್ಯವನ್ನು ಕೆಲ ಸಮಯ ಮೊಟಕುಗೊಳಿಸಿದ್ದಾರೆ. ಆತನತ್ತ ಧಾವಿಸಿ ಬಂದ ಆಟಗಾರ್ತಿಯು ಮೊದಲಿಗೆ ಆತನಿಗೆ ಪಾನೀಯವನ್ನು ಕುಡಿಯಲು ನೀಡಿದ್ದಾರೆ. ಹಾಗೂ ತಿನ್ನಲು ಸ್ವಲ್ಪ ಜೆಲ್ ಕೂಡ ನೀಡಿದ್ರು.

JodieBurrage - Twitter Search / Twitter

ಬಾಲಕ ಕೋರ್ಟ್ ನಿಂದ ಹೊರಗೆ ಹೋಗುವವರೆಗೆ ಸುಮಾರು 10 ನಿಮಿಷಗಳ ಕಾಲ ಪಂದ್ಯವನ್ನು ನಿಲ್ಲಿಸಲಾಯಿತು. ಇದರ ಫೋಟೋ, ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ. ಆಟಗಾರ್ತಿಯ ಮಾನವೀಯತೆಗೆ ಹಲವಾರು ಮಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಆದರೆ ದುರದೃಷ್ಟವಶಾತ್ ಪಂದ್ಯದಲ್ಲಿ 23 ವರ್ಷ ವಯಸ್ಸಿನ ಬುರೇಜ್‌ ಸೋಲನ್ನನ್ನುಭವಿಸಿದ್ರು. ಟೂರ್ನಿಯ ಆರಂಭಿಕ ದಿನದಂದು ಅವರು ಲೆಸಿಯಾ ಟ್ಸುರೆಂಕೊ ವಿರುದ್ಧ 6-2, 6-3 ಸೆಟ್‌ಗಳಿಂದ ಸೋತರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...