
ನಿನ್ನೆ ನಡೆದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಣ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ತಂಡ 52ರನ್ ಗಳಿಂದ ಭರ್ಜರಿ ಜಯ ಸಾಧಿಸಿತು.
ಈ ಮೂಲಕ ಇಂಗ್ಲೆಂಡ್ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಎರಡನೇ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಮೈದಾನಕ್ಕಿಳಿಯುತ್ತಿದ್ದಂತೆ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ನಿನ್ನೆಯ ಪಂದ್ಯ ಬೆನ್ ಸ್ಟೋಕ್ಸ್ ಅವರ 100ನೇ ಏಕದಿನ ಪಂದ್ಯವಾಗಿದೆ.
ತರಬೇತಿ ವೇಳೆ ಲೈಂಗಿಕ ದೌರ್ಜನ್ಯ: ಕೋಚ್ ವಿರುದ್ಧ ದೂರುಗಳ ಸುರಿಮಳೆ
ಬೆನ್ ಸ್ಟೋಕ್ಸ್ ಇದುವರೆಗೂ 100 ಏಕದಿನ ಪಂದ್ಯಗಳನ್ನಾಡಿದ್ದು 2839 ರನ್ ದಾಖಲಿಸಿದ್ದಾರೆ. 21 ಅರ್ಧಶತಕ ಹಾಗೂ 3 ಶತಕ ಸಿಡಿಸಿದ್ದಾರೆ. ಐಸಿಸಿ ಏಕದಿನ ಆಲ್ರೌಂಡರ್ಸ್ ರ್ಯಾಂಕಿಂಗ್ ನಲ್ಲಿ 4ನೇ ಸ್ಥಾನದಲ್ಲಿದ್ದಾರೆ.