ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಭಾರೀ ಮುಖಭಂಗವಾಗಿದ್ದು, ಪಂಜಾಬ್ ಸಿಎಂ ಚರಣ್ಜೀತ್ ಸಿಂಗ್ ಚನ್ನಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋಲನ್ನು ಕಂಡಿದ್ದಾರೆ. 2007 ರಿಂದಲೂ ಸ್ಪರ್ಧಿಸುತ್ತಿದ್ದ ಚಮಕೌರ್ ಸಾಹಿಬ್ನಲ್ಲಿಯೂ ಚನ್ನಿ ಸೋತಿದ್ದಾರೆ.
ಚಮಕೌರ್ನಲ್ಲಿ ಚನ್ನಿಯನ್ನು ಆಪ್ನ ಡಾ. ಚರಂಜೀತ್ ಸಿಂಗ್ 5000 ಮತಗಳ ಅಂತರದಿಂದ ಸೋಲಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾದ ಡಾ. ಸಿಂಗ್ 2017ರ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಚನ್ನಿ ವಿರುದ್ಧ ಪರಾಭವಗೊಂಡಿದ್ದರು.
ಇತ್ತ ಭದೌರ್ ಕ್ಷೇತ್ರದಲ್ಲಿಯೂ ಚನ್ನಿ ಸೋಲನ್ನು ಅನುಭವಿಸಿದ್ದಾರೆ. ಆಪ್ ಪಕ್ಷದ ಲಾಭ್ ಸಿಂಗ್ ಉಗೋಕೆ 33 ಸಾವಿರಕ್ಕೂ ಅಧಿಕ ಮತಗಳಿಂದ ಚರಣ್ಜೀತ್ ಸಿಂಗ್ ಚನ್ನಿಯನ್ನು ಸೋಲಿಸಿದ್ದಾರೆ.