ಸಾಮಾನ್ಯವಾಗಿ ಭಾರತದ ಡೊಮೆಸ್ಟಿಕ್ ವಿಮಾನಗಳಲ್ಲಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪ್ರಕಟಣೆ ಹೊರಡಿಸಲಾಗುತ್ತದೆ. ಆದ್ರೆ ಪೈಲಟ್ ಒಬ್ಬರು ಪಂಜಾಬಿ ಮಿಶ್ರಿತ ಇಂಗ್ಲಿಷ್‌ನಲ್ಲಿ ಪ್ರಕಟಣೆ ಹೊರಡಿಸುವ ಮೂಲಕ ವಿಮಾನ ಪ್ರಯಾಣಿಕರ ಮನಗೆದ್ದಿದ್ದಾರೆ.
ಇಂಡಿಗೋ ವಿಮಾನ ಬೆಂಗಳೂರಿನಿಂದ ಚಂಡೀಗಢಕ್ಕೆ ಹೊರಟಿತ್ತು. ವಿಮಾನದ ಏರ್ ಮೈಕ್ರೋಫೋನ್‌ನಲ್ಲಿ ಮಾತನಾಡಿದ ಪೈಲಟ್, ಪಂಜಾಬಿ ಹಾಗೂ ಇಂಗ್ಲಿಷ್ ಮಿಕ್ಸ್ ಮಾಡಿ ಮಾತನಾಡುತ್ತ ಪ್ರಯಾಣಿಕರಿಗೆ ಸೂಚನೆಗಳನ್ನು ನೀಡಿದ್ರು.
ಈ ವಿಡಿಯೋ ಈಗ ವೈರಲ್ ಆಗಿದೆ. ಪ್ರಯಾಣಿಕರೊಬ್ಬರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿಭಿನ್ನ ಭಾಷೆಗಳಲ್ಲಿ ಸ್ವಾಗತಿಸಿದ್ದರು.
ಮಲಯಾಳಂ, ಬಾಂಗ್ಲಾ, ಗುಜರಾತಿ ಮತ್ತು ಮರಾಠಿಯಲ್ಲಿ ವೆಲ್ಕಮ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ವಿದ್ಯಾರ್ಥಿಗಳನ್ನು ಹೊತ್ತ ಈ ವಿಶೇಷ ವಿಮಾನ ಪೋಲೆಂಡ್‌ನಿಂದ ಭಾರತಕ್ಕೆ ಆಗಮಿಸಿತ್ತು.