ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ಪಂಚರಾಜ್ಯಗಳ ಚುನಾವಣೆಯಲ್ಲಿ ಸರಿ ಸುಮಾರು 8 ಲಕ್ಷ ಮತದಾರರು ನೋಟಾ ಆಯ್ಕೆಯನ್ನು ಬಳಕೆ ಮಾಡಿದ್ದಾರೆ ಎನ್ನಲಾಗಿದೆ.
ಮಣಿಪುರದಲ್ಲಿ ಒಟ್ಟು 10,349 ಮತದಾರರಲ್ಲಿ 0.6 ಪ್ರತಿಶತ ಮಂದಿ ನೋಟಾ ಆಯ್ಕೆಯನ್ನು ಬಳಕೆ ಮಾಡಿದ್ದಾರೆ. ಇತ್ತ ಗೋವಾದಲ್ಲಿ 10,629 ಮಂದಿ ಮತದಾರರು ನೋಟಾ ಆಯ್ಕೆಯನ್ನು ಬಳಕೆ ಮಾಡಿದ್ದಾರೆ.
ಇನ್ನು ಇತ್ತ ಉತ್ತರ ಪ್ರದೇಶದಲ್ಲಿ 6,21,186 ಮಂದಿ ಮತದಾರರು ನೋಟಾ ಆಯ್ಕೆಯನ್ನು ಬಳಕೆ ಮಾಡಿದ್ದಾರೆ. ಉತ್ತರಾಖಂಡ್ನಲ್ಲಿ ಇವಿಎಂಗಳಲ್ಲಿ ನೋಟಾ ಬಟನ್ ಒತ್ತಿದವರ ಸಂಖ್ಯೆ 46,830 (ಶೇ. 0.9). ಪಂಜಾಬ್‌ನಲ್ಲಿ 1,10,308 ಮತದಾರರು (ಶೇ. 0.9) ನೋಟಾ ಮೊರೆ ಹೋಗಿದ್ದಾರೆ. ಎಲ್ಲಾ ಐದು ರಾಜ್ಯಗಳಲ್ಲಿ ಒಟ್ಟು 7,99,302 ನೋಟಾ ಆಯ್ಕೆ ಮತದಾರರಿದ್ದಾರೆ.
ವಿದ್ಯುನ್ಮಾನ ಯಂತ್ರಗಳ ಮೇಲೆ ನೋಟಾ ಆಯ್ಕೆಯನ್ನು 2013ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದೆ. ಅಭ್ಯರ್ಥಿಗಳು ಯಾರೂ ಇಷ್ಟವಾಗದೇ ಹೋದಲ್ಲಿ ನಮ್ಮ ಆಯ್ಕೆ ಯಾರೂ ಅಲ್ಲ ಎಂದು ಸೂಚಿಸಲು ಈ ಆಯ್ಕೆಯನ್ನು ಬಳಸಲಾಗುತ್ತದೆ.