ಲಂಡನ್: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇದೀಗ ಬ್ರಿಟನ್ ಪ್ರವಾಸ ಕೈಗೊಂಡಿದ್ದು ತಮ್ಮ ಗಡ್ಡವನ್ನು ಟ್ರಿಮ್ ಮಾಡುವ ಮೂಲಕ ಸೂಟ್-ಬೂಟ್, ಟೈ ಹಾಕಿಕೊಂಡು ನ್ಯೂ ಲುಕ್ನಲ್ಲಿ ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದಾರೆ.
ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದ ಅವರು ಫುಲ್ ಗಡ್ಡ ಬಿಟ್ಟಿದ್ದು ಸಾಮಾಜಿಕ, ರಾಜಕೀಯ, ಮಾಧ್ಯಮ ವಲಯದಲ್ಲೂ ಚರ್ಚೆಯಾಗಿತ್ತು.
ಒಂದು ವಾರ ಬ್ರಿಟನ್ನ ಪ್ರವಾಸದಲ್ಲಿರುವ ರಾಹುಲ್ ಗಾಂಧಿಯವರು ಅಲ್ಲಿನ ಕೇಂಬ್ರಿಡ್ಜ್ ಜಡ್ ಬ್ಯುಸಿನೆಸ್ ಸ್ಕೂಲ್ಗೆ ಭೇಟಿ ನೀಡಿ, ಆ ಶಾಲೆಯ ವಿದ್ಯಾರ್ಥಿಗಳಿಗೆ “21ನೇ ಶತಮಾನದ ಕೇಳಿ, ಕಲಿಯುವುದು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ್ದಾರೆ.