ಹುಟ್ಟು ಆಕಸ್ಮಿಕ ಸಾವು ಖಚಿತ ಎಂಬ ಮಾತಿದೆ. ಆದರೆ ಸಾವು ಯಾವ ರೂಪದಲ್ಲಿ, ಯಾವ ಸಂದರ್ಭದಲ್ಲಿ, ಯಾವಾಗ ಬರುತ್ತದೆ ಎಂಬುದನ್ನು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಇದಕ್ಕೆ ಪುಷ್ಟಿ ನೀಡುವಂತಹ ಹಲವಾರು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಇದೀಗ ಅಂತಹುದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಹಲ್ಲು ನೋವಿನ ಕಾರಣಕ್ಕೆ ಕ್ಲಿನಿಕ್ ಒಂದರಲ್ಲಿ ತಪಾಸಣೆಗೆ ತೆರಳಿದ್ದ ಉದ್ಯಮಿಯೊಬ್ಬರು ಅಲ್ಲಿ ಪೇಪರ್ ಓದುತ್ತಾ ಕುಳಿತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಆಘಾತಕಾರಿ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗುಜರಾತಿನ ಸೂರತ್ ನಿವಾಸಿ 61 ವರ್ಷದ ದಿಲೀಪ್ ಕುಮಾರ್ ಉದ್ಯಮಿಯಾಗಿದ್ದು ಇವರು ಕಾರ್ಯ ನಿಮ್ಮಿತ್ತ ಬಾರ್ಮಾರ್ ಗೆ ತೆರಳಿದ್ದರು. ಈ ವೇಳೆ ಅವರಿಗೆ ಹಲ್ಲು ನೋವು ಕಾಣಿಸಿಕೊಂಡ ಕಾರಣ ನವೆಂಬರ್ 5 ರಂದು ಸಮೀಪದ ಕ್ಲಿನಿಕ್ಕಿಗೆ ತೆರಳಿದ್ದರು.
ಆದರೆ ಅವರ ಸರದಿ ಬಾರದ ಕಾರಣ ಹೊರಗೆ ಕುಳಿತು ನ್ಯೂಸ್ ಪೇಪರ್ ಓದುತ್ತಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿದ್ದು, ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆ ಸಿಬ್ಬಂದಿ ಅವರನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ದರಾದರು ಅಷ್ಟರಲ್ಲಾಗಲೇ ದಿಲೀಪ್ ಕುಮಾರ್ ಮೃತಪಟ್ಟಿದ್ದರು.