ತಮ್ಮ ಅದ್ಭುತ ಕಂಠಸಿರಿಯಿಂದ ಎಲ್ಲರನ್ನು ಮೋಡಿ ಮಾಡಿದ್ದ ಭಾರತದ ನೈಟಿಂಗೇಲ್ ಎಂಬ ಬಿರುದು ಪಡೆದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್, ಫೆಬ್ರವರಿ 6 ರಂದು ಕೊನೆಯುಸಿರೆಳೆದಿದ್ದಾರೆ.
ದೇಶದಾದ್ಯಂತ ಮಾತ್ರವಲ್ಲದೆ, ಪ್ರಪಂಚದಾದ್ಯಂತ ಅಭಿಮಾನಿಗಳು ಅವರ ಅಗಲಿಕೆಯಿಂದ ದುಃಖಿತರಾಗಿದ್ದಾರೆ. ಪ್ರಸಿದ್ಧ ಗಾಯಕಿ ನಿಧನದ ಬಗ್ಗೆ ಅನೇಕ ಅಂತಾರಾಷ್ಟ್ರೀಯ ಗಾಯಕರು ಮತ್ತು ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್ನ ಡಿಜಿಟಲ್ ಬಿಲ್ಬೋರ್ಡ್ನಲ್ಲಿ ಗಾಯಕಿಗೆ ಶ್ರದ್ಧಾಂಜಲಿ ಸಲ್ಲಿಸಿ, ಗೌರವ ಸೂಚಿಸಲಾಗಿದೆ.
ಟೈಮ್ಸ್ ಸ್ಕ್ವೇರ್ ಬಿಲ್ಬೋರ್ಡ್ನಲ್ಲಿ ದಿವಂಗತ ಗಾಯಕಿಯ ಫೋಟೋ ಕ್ಲಿಪ್ ಅನ್ನು ಬಾಣಸಿಗ ವಿಕಾಸ್ ಖನ್ನಾ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 1981ರ ಸಿಲ್ಸಿಲಾ ಚಿತ್ರದ ಯೇ ಕಹಾನ್ ಆ ಗಯೇ ಹಮ್ ಹಾಡು ಪ್ಲೇ ಮಾಡಲಾಗಿದೆ.
ಟೈಮ್ಸ್ ಸ್ಕ್ವೇರ್ನಲ್ಲಿ ಡಿಜಿಟಲ್ ಟ್ರಿಬ್ಯೂಟ್ ಅನ್ನು ಇಂಡಿಯನ್ ಕಲ್ಚರಲ್ ಸೆಂಟರ್ ಬೈಂಡರ್, ವಿಕಾಸ್ ಖನ್ನಾ ಅವರು ಪ್ರಾರಂಭಿಸಿದ ಸಂಸ್ಥೆಯು ವಿಶ್ವದಾದ್ಯಂತ ಭಾರತದ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರಚಾರ ಮಾಡುವ ಗುರಿಯನ್ನು ಹೊಂದಿದೆ.
ಏಳು ದಶಕಗಳ ಕಾಲದ ತನ್ನ ಸುಪ್ರಸಿದ್ಧ ವೃತ್ತಿಜೀವನದಲ್ಲಿ, ಲತಾ ಮಂಗೇಶ್ಕರ್ ಅವರು ಸಾವಿರಾರು ಹಿಂದಿ ಚಲನಚಿತ್ರಗಳು ಮತ್ತು ಮೂವತ್ತಾರು ಪ್ರಾದೇಶಿಕ ಭಾಷೆಗಳು ಮತ್ತು ವಿದೇಶಿ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.
https://youtu.be/fV_JmFA5MPw