ಅಮೆರಿಕದ ನ್ಯೂಯಾರ್ಕ್ ನಗರದ ಸಾಂಪ್ರದಾಯಿಕ ಸೆಂಟ್ರಲ್ ಪಾರ್ಕ್ನಲ್ಲಿ ಶುದ್ಧ ಚಿನ್ನದಿಂದ ಮಾಡಿದ ಬೃಹತ್ ಘನವೊಂದು ಕಾಣಿಸಿಕೊಂಡಿದೆ. ಈ ಚಿನ್ನದ ಘನವು ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಇದನ್ನು ಜಗತ್ತಿಗೆ ಪ್ರಸ್ತುತ ಪಡಿಸಲಾಗಿದೆ.
ದಿ ಕ್ಯಾಸ್ಟೆಲ್ಲೋ ಕ್ಯೂಬ್ ಪರಿಶುದ್ಧವಾದ 24 ಕ್ಯಾರಟ್ ಚಿನ್ನದಿಂದ ಮಾಡಲ್ಪಟ್ಟಿದೆ. ಇದು ಸಂಪೂರ್ಣ ಚಿನ್ನದಿಂದ ಮಾಡಲ್ಪಟ್ಟ ಘನವಾಗಿದ್ದು 186 ಕೆಜಿ ತೂಕವನ್ನು ಹೊಂದಿದೆ.
ಮನುಕುಲದ ಇತಿಹಾಸದಲ್ಲಿಯೇ ಹಿಂದೆಂದೂ ಇಷ್ಟೊಂದು ಅಗಾಧ ಪ್ರಮಾಣದ ಚಿನ್ನವನ್ನು ಒಂದೇ ಆಕೃತಿಯಲ್ಲಿ ಎರಕ ಹೊಯ್ದಿರಲಿಲ್ಲ. ಚಿನ್ನ ಒಂದು ಶಾಶ್ವತ ಲೋಹವಾಗಿದ್ದು ಇದು ಸೂರ್ಯ, ಬೆಳಕು ಹಾಗೂ ಒಳ್ಳೆಯತನದ ಸಂಕೇತವಾಗಿದೆ.
ಈ ಚಿನ್ನದ ಘನವನ್ನು ತಯಾರಿಸಿದ ಕಲಾವಿದನ ಹೆಸರು ನಿಕ್ಲಾಸ್ ಕ್ಯಾಸ್ಟೆಲ್ಲೊ. ಇದನ್ನು ನಿರ್ಮಾಣ ಮಾಡಲು ಅವರು 4500 ಗಂಟೆಗಿಂತಲೂ ಅಧಿಕ ಸಮಯವನ್ನು ತೆಗೆದುಕೊಂಡಿದ್ದಾರೆ. ಇದೊಂದು ಮೊಟ್ಟ ಮೊದಲ ಕಲಾಕೃತಿ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಇಂತಹ ಚಿನ್ನದ ಘನವು ಇಡೀ ವಿಶ್ವದ ಇತಿಹಾಸದಲ್ಲಿಯೇ ಹಿಂದೆಂದೂ ನಿರ್ಮಾಣವಾಗದ ಕಾರಣ ಈ ಕಲಾಕೃತಿಗೆ ಯಾವುದೇ ಮಾದರಿಗಳು ಇಲ್ಲ.
ಡಾ. ಡೈಟರ್ ಬುಚಾರ್ಟ್ನಂತಹ ಇತಿಹಾಸ ಕಲಾಕಾರರು ಈಗಾಲೇ ದಿ ಕ್ಯಾಸ್ಟೆಲ್ಲೋ ಕ್ಯೂಬ್ನ್ನು ಕಲೆ ಇತಿಹಾಸಕ್ಕೆ ಅನನ್ಯ ಕೊಡುಗೆ ಎಂದು ಪರಿಗಣಿಸಿದ್ದಾರೆ.