ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಾರು ಚಾಲಕರೊಬ್ಬರ ಪುತ್ರಿ ನ್ಯಾಯಾಂಗ ಪರೀಕ್ಷೆಯಲ್ಲಿ 66ನೇ ರ್ಯಾಂಕ್ ಪಡೆಯುವ ಮೂಲಕ ನ್ಯಾಯಾಧೀಶೆಯಾಗುವ ಅವಕಾಶ ಪಡೆದುಕೊಂಡಿದ್ದಾರೆ.
ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಕಾರು ಚಾಲಕನ ಪುತ್ರಿ ಕಾರ್ತಿಕಾ ಗೆಹ್ಲೋಟ್, ಈ ಸಾಧನೆ ಮಾಡಿದವರಾಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬಡ ಕುಟುಂಬದಲ್ಲಿ ಜನಿಸಿದ್ದ ಅವರು ಬಾಲ್ಯದಿಂದಲೇ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ಕಾನೂನು ಪದವಿ ಪಡೆದೆ ಬಳಿಕ ನ್ಯಾಯಾಧೀಶೆಯಾಗುವ ಹಂಬಲ ಹೊಂದಿದ್ದರು. ಇದೀಗ ಅವರ ಕನಸು ಈಡೇರುವ ಕಾಲ ಬಂದಿದೆ.