
ಕಳೆದ ವರ್ಷ ಬಚ್‌ಪನ್ ಕಾ ಪ್ಯಾರ್ ಗೀತೆಯನ್ನು ಹಾಡುವ ಮೂಲಕ ಬಾಲಕ ಸಹದೇವ್ ದಿರ್ಡೋ ಇಂಟರ್ನೆಟ್ನನಲ್ಲಿ ಬಿರುಗಾಳಿ ಎಬ್ಬಿಸಿದ್ದರು. ನಂತರ ಹಲವಾರು ರೀಲ್ಸ್ ಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಖ್ಯಾತಿ ಪಡೆದಿದ್ದರು. ಇದೀಗ ಸಹದೇವ್ ದಿರ್ಡೋ ಹೊಸ ವಿಡಿಯೋದೊಂದಿಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.
ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಹಳದಿ ಬಣ್ಣದ ಟಿ-ಶರ್ಟ್, ಗುಲಾಬಿ ಬಣ್ಣದ ಜಾಕೆಟ್, ಡೆನಿಮ್ ಜೀನ್ಸ್ ಮತ್ತು ಬಿಳಿ ಸ್ನೀಕರ್ಸ್ ಧರಿಸಿರುವ ಬಾಲಕ ನೋರಾ ಫತೇಹಿಯ ಡ್ಯಾನ್ಸ್ ಮೇರಿ ರಾಣಿಗೆ ಕುಣಿದಿದ್ದಾರೆ.
ಛತ್ತೀಸ್‌ಗಢದ ಮೂಲದ ಬಾಲಕ ಸಹದೇವ್ ಡಿರ್ಡೊ, 2019 ರ ಹಾಡಿನ ಆವೃತ್ತಿಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಇಂಟರ್ನೆಟ್ ಸೆನ್ಸೇಶನ್ ಆಗಿದ್ದರು. ಬಚ್ಪನ್ ಕಾ ಪ್ಯಾರ್ ಸಾಮಾಜಿಕ ಮಾಧ್ಯಮದಲ್ಲಿ ಮೆಮೆ ಅನ್ನು ಹುಟ್ಟುಹಾಕಿತ್ತು. ಇದು ಈತನಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿತು.
ಇದೀಗ ಹೊಸ ವಿಡಿಯೋದಲ್ಲಿ, ಸಹದೇವ್ ಅವರು ನೋರಾ ಫತೇಹಿಯ ಡ್ಯಾನ್ಸ್ ಮೇರಿ ರಾಣಿ ಹಾಡಿಗೆ ನೃತ್ಯ ಮಾಡಿದ್ದಾರೆ. ವಿಡಿಯೋವನ್ನು 65,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.