ಕಾಲೇಜು ವಿದ್ಯಾರ್ಥಿನಿಯೊಬ್ಬಳು ನೋಡನೋಡುತ್ತಿದ್ದಂತೆ ಹಾಡ ಹಗಲೇ ಸೇತುವೆ ಮೇಲೆ ತನ್ನ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿರುವ ಆಘಾತಕಾರಿ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನ ಶಹಬಾದ ಸಮೀಪದ ಕಾಗಿಣ ನದಿ ಸೇತುವೆ ಮೇಲೆ ತನ್ನ ಸ್ಕೂಟಿ ನಿಲ್ಲಿಸಿದ ಭಾಗ್ಯಶ್ರೀ ಎಂಬ ಈ ವಿದ್ಯಾರ್ಥಿನಿ ಬಳಿಕ ನದಿಗೆ ಹಾರಿದ್ದಾಳೆ.
ಈಕೆ ಚಿತ್ತಾಪುರ ತಾಲೂಕಿನ ಗುಂಡುಗುರ್ತಿ ಗ್ರಾಮದ ನಿವಾಸಿಯಾಗಿದ್ದು, ಕಲಬುರ್ಗಿ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ವಿದ್ಯಾರ್ಥಿನಿ ಏಕಾಏಕಿ ನದಿಗೆ ಹಾರಿದ್ದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು ನಾಪತ್ತೆಯಾಗಿರುವ ಆಕೆಗಾಗಿ ಈಗ ಹುಡುಕಾಟ ನಡೆದಿದೆ.