
ರಾಜಸ್ಥಾನದ ಜೈಸಲ್ಮೇರ್ ನ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಪಂಚರ್ ಅಂಗಡಿ ಮುಂದೆ ನಿಂತಿದ್ದ ಯುವಕರು ಅಕ್ಷರಶಃ ಮೋರಿಯಲ್ಲಿ ಕುಸಿದು ಬಿದ್ದಿದ್ದಾರೆ.
ಪಂಚರ್ ಅಂಗಡಿ ಮುಂದೆ ಮಾತನಾಡುತ್ತಾ ನಿಂತಿದ್ದ ಐದು ಜನ ಯುವಕರು ತಾವು ನಿಂತಿದ್ದ ಕಲ್ಲು ಇದ್ದಕ್ಕಿದ್ದಂತೆ ಮುರಿದು ಬಿದ್ದ ಕಾರಣ ಮೋರಿಯೊಳಗೆ ಹೂತು ಹೋಗಿದ್ದಾರೆ. ಇವರ ಜೊತೆ ಅಲ್ಲಿದ್ದ ಬೈಕು ಸಹ ಮೋರಿ ಒಳಗೆ ಬಿದ್ದಿದೆ. ಅದೃಷ್ಟವಶಾತ್ ಮೋರಿಯಲ್ಲಿ ನೀರು ಇಲ್ಲದೆ ಇದ್ದುದರಿಂದ ಐದೂ ಜನ ಯುವಕರು ಅಪಾಯದಿಂದ ಪಾರಾಗಿದ್ದಾರೆ.
ಮೋರಿ ಒಳಗೆ ಬಿದ್ದ ಐದು ಜನ ಯುವಕರನ್ನು ಮೇಲೆತ್ತಲಾಗಿದ್ದು ಸಣ್ಣಪುಟ್ಟ ತರಚು ಗಾಯಗಳಾಗಿವೆ. ಟೈಯರ್ ಗಳನ್ನು ಜೋಡಿಸಿದ್ದರಿಂದ ತೂಕ ಹೆಚ್ಚಾಗಿ ಕಲ್ಲು ಕುಸಿಯಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.