ನವದೆಹಲಿ: 2016 ನೋಟ್ ಬ್ಯಾನ್ ಆದ ವರ್ಷ 500, 1000 ರೂಪಾಯಿ ನೋಟ್ ಬ್ಯಾನ್ ಮಾಡುವ ನಿರ್ಧಾರವನ್ನು ತೆಗೆದುಕೊಳ್ತು ಕೇಂದ್ರ ಸರ್ಕಾರ. ಇದಾದ ನಂತರ ಕೇಂದ್ರದ ವಿರುದ್ಧ ಒಂದಿಷ್ಟು ಆರೋಪಗಳ ಸುರಿಮಳೆ ಬಂದವು. ಈ ರೀತಿ ಏಕಾಏಕಿ ಮಾಡುವುದು ಸರಿಯಲ್ಲ ಅಂತ ಅನೇಕರು ಸುಪ್ರೀಂ ಮೆಟ್ಟಿಲೇರಿದ್ದರು. ನೋಟು ರದ್ದು ಪ್ರಶ್ನಿಸಿ ಒಟ್ಟು 58 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ತೀರ್ಪು ಇಂದು ಹೊರ ಬಿದ್ದಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಇಂದು ತೀರ್ಪು ಪ್ರಕಟ ಮಾಡಿದೆ. ನೋಟು ಬದಲಾಯಿಸಲು ಕೇಂದ್ರ ನೀಡಿದ್ದ ಕಾಲಾವಕಾಶ ಸರಿಯಾಗಿದೆ. ನೋಟು ಅಮಾನ್ಯಗೊಳಿಸಿದ ಸಂದರ್ಭದಲ್ಲಿ ಒಂದಿಷ್ಟು ಚರ್ಚೆ ಆಗಿದ್ದವು. ಆರ್ ಬಿ ಐ ಮತ್ತು ಕೇಂದ್ರ ಸರ್ಕಾರ ಚರ್ಚೆ ಮಾಡಿದ ಬಳಿಕವೇ ಇದನ್ನು ಮಾಡಲಾಗಿದೆ ಎಂದು ಹೇಳಿದೆ ಪೀಠ.
ಇನ್ನು ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸುವುದಿಲ್ಲ ಎಂದಿದೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ನೋಟ್ ಬ್ಯಾನ್ ವಿಚಾರದಲ್ಲಿ ದೊಡ್ಡ ಗೆಲುವು ಲಭಿಸಿದೆ. ಕೇಂದ್ರ ಹಾಗೂ ಆರ್ ಬಿ ಐ ಗೆ ಈ ಸಂಬಂದ ದಾಖಲೆ ನೀಡುವಂತೆ ಕೋರ್ಟ್ ಸೂಚಿಸಿತ್ತು. ಅದರಂತೆ ಎಲ್ಲಾ ದಾಖಲೆಗಳನ್ನು ಕೋರ್ಟ್ ಗೆ ನೀಡಲಾಗಿದ್ದು, ಇದೀಗ ಮಹತ್ವದ ತೀರ್ಪು ಹೊರ ಬಿದ್ದಿದೆ.