![](https://kannadadunia.com/wp-content/uploads/2019/06/327394_1100-1024x768.jpg)
ಮಾನವ ದೇಹದಲ್ಲಿ ಕೂದಲು ಸಾಮಾನ್ಯವಾದರೂ ಮುಖದ ಮೇಲೆ ಕೂದಲು ಇದ್ದರೆ ಅದು ಎದ್ದು ಕಾಣಿಸುತ್ತದೆ. ಹೀಗಾಗಿ, ಕೆಲವರಿಗೆ ಆ ಕೂದಲಿನ ಲುಕ್ ಇಷ್ಟವಾದರೆ ಕೆಲವರಿಗೆ ಇಷ್ಟವಾಗುವುದಿಲ್ಲ.
ಇನ್ನು ಮಹಿಳೆಯರಿಗಂತೂ ಮುಖದಲ್ಲಿ ಕೂದಲು ಕಾಣಿಸಿಕೊಂಡರೆ ಅದನ್ನು ಅಸಹ್ಯ, ದೊಡ್ಡ ಸಮಸ್ಯೆ ಎನ್ನುವಂತೆ ನೋಡುತ್ತಾರೆ.
ಹೀಗಾಗಿ ಮುಖದಲ್ಲಿನ ಕೂದಲು ತೆಗೆಯಲು ಹಲವು ನೈಸರ್ಗಿಕ ವಿಧಾನಗಳು ಯಾವುದು ಎಂದು ನೋಡೋಣ.
ಸಕ್ಕರೆ ಹಾಗೂ ನಿಂಬೆ ರಸ
ಎರಡು ಟೇಬಲ್ ಸ್ಪೂನ್ ಸಕ್ಕರೆಗೆ ನಿಂಬೆರಸ ಮಿಕ್ಸ್ ಮಾಡಿ. ನಂತರ, ಅದಕ್ಕೆ 8-9 ಟೇಬಲ್ ಸ್ಪೂನ್‌ನಷ್ಟು ನೀರನ್ನು ಸೇರಿಸಿ. ಬಳಿಕ ಈ ಮಿಶ್ರಣವನ್ನು ಗುಳ್ಳೆಗಳು ಬರುವವರೆಗೆ ಕುದಿಸಿ. ಆರಿದ ಬಳಿಕ ಮುಖಕ್ಕೆ ಕೂದಲಿರುವ ಜಾಗಕ್ಕೆ ಹಚ್ಚಿ 20 ರಿಂದ 25 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆದುಕೊಂಡರೆ ಮುಖದ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.
ನಿಂಬೆ ಹಾಗೂ ಜೇನುತುಪ್ಪ
ವ್ಯಾಕ್ಸಿಂಗ್ ಮಾಡಿಕೊಳ್ಳುವ ಬದಲು ನೈಸರ್ಗಿಕವಾಗೇ ಮುಖದ ಕೂದಲು ನಿವಾರಣೆ ಮಾಡಬಹುದು. ಇದಕ್ಕೆ ಎರಡು ಟೇಬಲ್ ಸ್ಪೂನ್ ಸಕ್ಕರೆಗೆ ನಿಂಬೆರಸ ಹಾಗೂ 1 ಟೇಬಲ್ ಸ್ಪೂನ್ ಜೇನುತುಪ್ಪ ಮಿಕ್ಸ್ ಮಾಡಿ. ಬಳಿಕ ಮೂರು ನಿಮಿಷಗಳ ಕಾಲ ಆ ಮಿಶ್ರಣವನ್ನು ಕುದಿಸಿ ಅದಕ್ಕೆ ನೀರು ಸೇರಿಸಿ ಮಿಶ್ರಣವನ್ನು ತೆಳ್ಳಗೆ ಮಾಡಬೇಕು. ನಂತರ ಆ ಪೇಸ್ಟ್ ತಣ್ಣಗಾದ ಬಳಿಕ ಅದನ್ನು ಮುಖದಲ್ಲಿ ಕೂದಲು ಬೆಳೆದಿರುವ ಜಾಗಗಳಿಗೆ ಹಚ್ಚಿಕೊಳ್ಳಬೇಕು.
ಓಟ್‌ಮೀಲ್ ಹಾಗೂ ಬಾಳೆಹಣ್ಣು
ಎರಡು ಟೇಬಲ್ ಸ್ಪೂನ್ ಓಟ್‌ಮೀಲ್‌ಗೆ ಒಂದು ಹಣ್ಣಾದ ಬಾಳೆಹಣ್ಣನ್ನು ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಅಗತ್ಯವಿರುವ ಜಾಗಕ್ಕೆ ಹಚ್ಚಿಕೊಂಡು 15 ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಿ. ನಂತರ, ತಣ್ಣೀರಿನಿಂದ ಮುಖ ತೊಳೆದುಕೊಳ್ಳಬಹುದು. ಇದರಿಂದ ಮುಖದಲ್ಲಿರುವ ಅನಗತ್ಯ ಕೂದಲು ನಿವಾರಣೆಯಾಗಿ ತ್ವಚೆ ಹೊಳಪು ಪಡೆದುಕೊಳ್ಳುತ್ತದೆ.
ಮೊಟ್ಟೆಯ ಬಿಳಿ ಭಾಗ ಹಾಗೂ ಕಾರ್ನ್‌ಸ್ಟಾರ್ಚ್ ( ಜೋಳದ ಗಂಜಿ )
ಒಂದು ಟೇಬಲ್ ಸ್ಪೂನ್ ಜೋಳದ ಗಂಜಿ ಹಾಗೂ ಒಂದು ಟೇಬಲ್ ಸ್ಪೂನ್ ಸಕ್ಕರೆಯನ್ನು ಮೊಟ್ಟೆಯ ಬಿಳಿ ಭಾಗಕ್ಕೆ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಅನಗತ್ಯ ಕೂದಲಿರುವ ಪ್ರದೇಶಕ್ಕೆ ಹಚ್ಚಿಕೊಂಡು ಅದು ಒಣಗಿದ ಬಳಿಕ ಮುಖವನ್ನು ಸ್ವಚ್ಛಗೊಳಿಸಬೇಕು.