alex Certify ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಸೌತೆಕಾಯಿಯಿಂದ ʼಸೌಂದರ್ಯʼ ವೃದ್ಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಸೌತೆಕಾಯಿಯಿಂದ ʼಸೌಂದರ್ಯʼ ವೃದ್ಧಿ

ಸೌತೆಕಾಯಿ ದೇಹದ ಆರೋಗ್ಯದ ಜತೆಗೆ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಾಯಕಾರಿ. ಹಾಗಾದ್ರೆ ಈ ಸೌತೆಕಾಯಿಯಿಂದ ಯಾವೆಲ್ಲಾ ಸೌಂದರ್ಯ ಸಮಸ್ಯೆಗಳು ನಿವಾರಿಸಬಹುದು ಎಂಬುದನ್ನು ತಿಳಿಯೋಣ.

*ಇದು ಸನ್ ಟ್ಯಾನ್ ಮತ್ತು ಸೂರ್ಯನ ಕಿರಣದಿಂದ ಉಂಟಾಗುವ ಉರಿಯನ್ನು ಕಡಿಮೆ ಮಾಡುತ್ತದೆ. ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದ ಕಂದು ಬಣ್ಣವನ್ನು ಕಡಿಮೆ ಮಾಡುತ್ತದೆ.

*ಒತ್ತಡ, ನಿದ್ರೆಯ ಸಮಸ್ಯೆಯಿಂದ ಕಣ್ಣಿನ ಕೆಳಗೆ ಉಂಟಾದ ಡಾರ್ಕ್ ಸರ್ಕಲ್ ನ್ನು ಇದು ನಿವಾರಿಸುತ್ತದೆ. ಹಾಗೇ ಕಣ್ಣುಗಳ ಕೆಳಗೆ ಊದಿಕೊಂಡಿರುವುದು ಕಡಿಮೆಯಾಗುತ್ತದೆ.

 

*ಸೌತೆಕಾಯಿಯಲ್ಲಿ ಹೆಚ್ಚಾಗಿ ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಂ ಇದ್ದು, ಇದು ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಸುಕ್ಕುಗಟ್ಟುವುದನ್ನು ತಡೆಯುತ್ತದೆ.

*ಎಣ್ಣೆ ಮತ್ತು ಮೊಡವೆಗಳ ಸಮಸ್ಯೆಯನ್ನು ದೂರ ಮಾಡುತ್ತದೆ. ಸೌತೆಕಾಯಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...