ಕಣ್ಣಿನ ಅಂದ ಹೆಚ್ಚಿಸಲು ಮಸ್ಕರಾವನ್ನು ಹಚ್ಚುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಮಸ್ಕರಾಗಳು ರಾಸಾಯನಿಕಗಳಿಂದ ತುಂಬಿರುತ್ತದೆ. ಇದರಿಂದ ಕಣ್ಣಿಗೆ ಹಾನಿಯಾಗಬಹುದು. ಹಾಗಾಗಿ ಮಸ್ಕರಾವನ್ನು ಮನೆಯಲ್ಲಿಯೇ ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಬಹುದು.
2 ಚಮಚ ತೆಂಗಿನೆಣ್ಣೆ, 2 ಆಕ್ಟೀವ್ ಇದ್ದಿಲಿನ (activated charcoal ) ಕ್ಯಾಪ್ಸುಲ್ ಗಳು, ½ ಮೇಣದ ಉಂಡೆ, 3 ಚಮಚ ಅಲೋವೆರಾ ಜೆಲ್ ಇವಿಷ್ಟನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ ತೆಂಗಿನೆಣ್ಣೆ, ಅಲೋವೆರಾ ಜೆಲ್ ಮತ್ತು ಮೇಣದ ಉಂಡೆಗಳನ್ನು ಹಾಕಿ ಅವು ದ್ರವರೂಪಕ್ಕೆ ಬರುವವರೆಗೂ ಕರಗಿಸಿ,
ಬಳಿಕ ಅದಕ್ಕೆ ಆಕ್ಟೀವ್ ಇದ್ದಿಲಿನ ಕ್ಯಾಪ್ಸುಲ್ ಗಳನ್ನು ಹಾಕಿ ಮಿಕ್ಸ್ ಮಾಡಿ. ಅದನ್ನು ಬಿಸಿ ಇರುವಾಗಲೇ ಮಸ್ಕರಾ ಪಾತ್ರೆಗೆ ಸುರಿಯಿರಿ. ಇದನ್ನು 6 ತಿಂಗಳ ಕಾಲ ಬಳಸಬಹುದು. ಇದರಿಂದ ಕಣ್ಣುಗಳು ಆರೋಗ್ಯವಾಗಿ, ಅಂದವಾಗಿರುತ್ತದೆ.