ಸೌತೆಕಾಯಿಯು ಅತ್ಯಂತ ಆರೋಗ್ಯಕರವಾದ ಸೂಪರ್‌ಫುಡ್. ಇದು 95 ಪ್ರತಿಶತದಷ್ಟು ನೀರಿನಿಂದಲೇ ಆವೃತವಾಗಿದೆ. ಸೌತೆಕಾಯಿ ಸೇವಿಸುವುದರಿಂದ ನಿಮ್ಮ ತ್ವಚೆಯು ತೇವಾಂಶದಿಂದ ಕೂಡಿರುತ್ತದೆ ಮತ್ತು ನಿಮ್ಮ ದೇಹದಲ್ಲಿ ನೀರಿನ ಕೊರತೆ ಇರುವುದಿಲ್ಲ. ಅದಕ್ಕಾಗಿಯೇ ಸೌತೆಕಾಯಿಯನ್ನು ಆಹಾರದಲ್ಲಿ ಮತ್ತು ಚರ್ಮದ ಆರೈಕೆಯಲ್ಲಿ ಸೇರಿಸಲಾಗುತ್ತದೆ. ಸೌತೆಕಾಯಿ ತುಟಿಗಳ ಕಪ್ಪು ಬಣ್ಣವನ್ನು ಕೂಡ ಹೋಗಲಾಡಿಸಬಲ್ಲದು.
ಸುಂದರವಾದ ಗುಲಾಬಿ ತುಟಿಗಳಿಗಾಗಿ ಮನೆಯಲ್ಲೇ ತಯಾರಿಸಿದ ಸೌತೆಕಾಯಿ ಲಿಪ್ ಮಾಸ್ಕ್ ಬಳಸಬೇಕು. ಸೌತೆಕಾಯಿ ತುಟಿಗಳ ಸತ್ತ ಚರ್ಮವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದಾಗಿ ತುಟಿಗಳ ಕಪ್ಪು ಬಣ್ಣವನ್ನು ಹೋಗಲಾಡಿಸಬಹುದು. ನೈಸರ್ಗಿಕವಾಗಿ ಗುಲಾಬಿ ಬಣ್ಣದ ತುಟಿಗಳನ್ನು ಪಡೆಯಬಹುದು. ಇದಕ್ಕಾಗಿ ಸೌತೆಕಾಯಿಯ ಲಿಪ್ ಮಾಸ್ಕ್ ತಯಾರಿಸುವುದು ಹೇಗೆ ಅನ್ನೋದನ್ನು ನೋಡೋಣ.
ಸೌತೆಕಾಯಿ ಲಿಪ್ ಮಾಸ್ಕ್ ಮಾಡಲು ಬೇಕಾಗುವ ಸಾಮಾಗ್ರಿಗಳು – ಸೌತೆಕಾಯಿಯ 2-3 ಚೂರುಗಳು, ಕೆಲವು ಗುಲಾಬಿ ದಳಗಳು, ಜೇನುತುಪ್ಪ ಅರ್ಧ ಟೀ ಚಮಚ.
ಸೌತೆಕಾಯಿ ಲಿಪ್ ಮಾಸ್ಕ್ ತಯಾರಿಸುವುದು ಹೇಗೆ ?
ಮೊದಲು ಮಿಕ್ಸರ್ ಜಾರ್‌ಗೆ ಕತ್ತರಿಸಿದ ಸೌತೆಕಾಯಿ ಮತ್ತು ಗುಲಾಬಿ ಎಲೆಗಳನ್ನು ಸೇರಿಸಿ ಅವುಗಳನ್ನು ರುಬ್ಬಿಕೊಳ್ಳಿ. ನಂತರ ಈ ಮಿಶ್ರಣವನ್ನು ಒಂದು ಬೌಲ್‌ನಲ್ಲಿ ಹಾಕಿಕೊಂಡು ಅದಕ್ಕೆ ಜೇನುತುಪ್ಪವನ್ನು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ತುಟಿಗಳ ಮೇಲೆ ಸೌತೆಕಾಯಿಯ ಲಿಪ್ ಮಾಸ್ಕ್ ಅನ್ನು ಸಂಪೂರ್ಣವಾಗಿ ಅನ್ವಯಿಸಿ. ಸುಮಾರು 15-20 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ. ನಂತರ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ನಿಯಮಿತವಾಗಿ ಈ ರೀತಿ ಮಾಡುತ್ತ ಬಂದರೆ ತುಟಿಗಳು ಸಹಜ ಗುಲಾಬಿ ಬಣ್ಣವನ್ನು ಪಡೆದುಕೊಳ್ಳುತ್ತವೆ.