ಸರ್ಕಾರದ ನೈಟ್ ಕರ್ಪ್ಯೂಗೆ ಹೋಟೆಲ್ ಮಾಲೀಕರ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೊರೋನಾದಿಂದ ಈಗಾಗ್ಲೇ ಸಾಕಷ್ಟು ನಷ್ಟ ಅನುಭವಿಸಿರುವ ನಾವು ಮತ್ತೆ ಅದೇ ನಷ್ಟದ ಸುಳಿಗೆ ತಲುಪಲಿದ್ದೇವೆ, ಈ ಬಾರಿಯ ನೈಟ್ ಕರ್ಪ್ಯೂ ಅವೈಜ್ಞಾನಿಕ ಎಂದು ಹೊಟೇಲ್ ಮಾಲೀಕರು ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ಹೊರಹಾಕಿದ್ದಾರೆ.
ನೈಟ್ ಕರ್ಫ್ಯೂನಿಂದಾಗಿ ಹೋಟೆಲ್ಗಳಿಗೆ ಆಗೋ ಸಮಸ್ಯೆಗಳೇನು…?
ನೈಟ್ ಕರ್ಪ್ಯೂ ಜಾರಿಯಾದ್ರೆ ರಾತ್ರಿ 10 ಗಂಟೆ ಬಳಿಕ ವ್ಯಾಪಾರ ಇರಲ್ಲ. ಕೇವಲ ಪಾರ್ಸೆಲ್ ನಂಬಿಕೊಂಡು ವ್ಯವಹಾರ ವ್ಯಾಪಾರ ಮಾಡೋದು ಕಷ್ಟ. ಈಗಾಗ್ಲೇ ಹೊಸ ರೂಲ್ಸ್ ತಂದಿರೊ ಸರ್ಕಾರ ನ್ಯೂ ಇಯರ್ ಆಚರಣೆಗು ಬ್ರೇಕ್ ಹಾಕಿದೆ.
ಸಿಲಿಕಾನ್ ಸಿಟಿಯಲ್ಲಿ 24 ಸಾವಿರ ಹೋಟೆಲ್ ಗಳಿವೆ, 3500 ವಿಥ್ ಲಾಡ್ಜಿಂಗ್ ಹೋಟೆಲ್ ಗಳಿವೆ. ಬೆಂಗಳೂರಿನಲ್ಲಿ 65 ಸ್ಟಾರ್ ಹೋಟೆಲ್ ಗಳಿವೆ. ರಾಜ್ಯದಲ್ಲಿ ಸುಮಾರು 65 ಸಾವಿರ ಹೋಟೆಲ್ ಗಳಿವೆ, ಸದ್ಯ ಸರ್ಕಾರದ ಗೈಡ್ ಲೈನ್ಸ್ ನಿಂದ ರಾತ್ರಿ 10 ಗಂಟೆಗೆ ಹೋಟೆಲ್ ಬಂದ್ ಮಾಡಬೇಕು. 10 ಗಂಟೆಗೆ ಬಂದ್ ಮಾಡಬೇಕು ಅಂದ್ರೆ,9:30 ಕ್ಕೆ ಲಾಸ್ಟ್ ಸರ್ವಿಸ್ ನೀಡಬೇಕು. ಗ್ರಾಹಕರು ಹೆಚ್ಚು ಊಟಕ್ಕೆ ಬರೊದೆ ರಾತ್ರಿ 9 ಗಂಟೆ ನಂತರ, ನಾವು 9: 30 ಕ್ಕೆ ಲಾಸ್ಟ್ ಸರ್ವಿಸ್ ಅಂದ್ರೆ ಗ್ರಾಹಕರೆ ಬರೊದಿಲ್ಲ. ಇದರಿಂದ ಹೋಟೆಲ್ ಉದ್ಯಮಕ್ಕೆ ಶೇ 30 ರಿಂದ 40% ನಷ್ಟ ಉಂಟಾಗುತ್ತೆ, ಹೋಟೆಲ್ ವ್ಯಾಪರ ವಹಿವಾಟು ಕುಸಿತ ಕಾಣಿಸುತ್ತೆ. ಬರಿ ಪಾರ್ಸೆಲ್ ಕೊಡೊದಕ್ಕಾದರು ಹೋಟೆಲ್ ಓಪನ್ ಇರಬೇಕು, ಆದ್ರೆ ಹತ್ತು ಗಂಟೆಯವರೆಗಿನ ನಿಯಮದಿಂದ ಕಾರ್ಮಿಕರಿಗು ಆಹಾರ ಸಪ್ಲೈ ಮಾಡೋದಕ್ಕೆ ಕಷ್ಟವಾಗತ್ತೆ. ನೈಟ್ ಕರ್ಪ್ಯೂ ನಿಂದ ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮಕ್ಕೆ ಸಾಮಾನ್ಯ ದಿನಗಳಲ್ಲಿ 4 ರಿಂದ 5ಕೋಟಿಯಷ್ಟು ನಷ್ಟವಾಗುತ್ತೆ. ನ್ಯೂಇಯರ್ ದಿನದಂದು 200 ರಿಂದ 250 ಕೋಟಿ ವ್ಯವಹಾರ ನಡೆಯುತ್ತಿತ್ತು. ಬೆಂಗಳೂರು ಸೇರಿ ಕರ್ನಾಟಕದಲ್ಲಿ 550-600 ಕೋಟಿ ಹೋಟೆಲ್ ಉದ್ಯಮದ ವ್ಯವಹಾರ ನಡೆಯುತಿತ್ತು. ಆದ್ರೆ ಸರ್ಕಾರದ ಈ ಹೊಸ ಗೈಡ್ ಲೈನ್ಸ್ ನಿಂದ ಹೋಟೆಲ್ ಉದ್ಯಮಕ್ಕೆ ತೀವ್ರವಾದ ಆರ್ಥಿಕ ನಷ್ಟ ಉಂಟಾಗತ್ತೆ ಎಂಬುದು ಹೊಟೇಲ್ ಮಾಲೀಕರ ವಾದ.