ಉದ್ಯೋಗ ಹುಡುಕಾಟದಲ್ಲಿ ರೆಸ್ಯೂಮ್ ಪ್ರಮುಖ ಅಸ್ತ್ರ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಯಾಕಂದ್ರೆ ನಿಮ್ಮ ವಿದ್ಯಾರ್ಹತೆ, ಸಾಮರ್ಥ್ಯಗಳು ಮತ್ತು ಗುಣಲಕ್ಷಣಗಳನ್ನು ರೆಸ್ಯೂಮ್ ವಿವರಿಸುತ್ತದೆ. ಉದ್ಯೋಗಾಕಾಂಕ್ಷಿ ಮತ್ತು ಮತ್ತು ನಿರೀಕ್ಷಿತ ನೇಮಕಾತಿದಾರರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ರೆಸ್ಯೂಮ್ ಬಹಳ ಚೆನ್ನಾಗಿರಲೇಬೇಕು.
ಇತ್ತೀಚಿನ ದಿನಗಳಲ್ಲಂತೂ ಆಯ್ಕೆದಾರರನ್ನು ಸೆಳೆಯುವ ಉದ್ದೇಶದಿಂದ ಆಸಕ್ತಿದಾಯಕ ಮತ್ತು ಸೃಜನಶೀಲ ರೆಸ್ಯೂಮ್‌ಗಳನ್ನು ರಚಿಸುತ್ತಾರೆ. ಇತ್ತೀಚೆಗಷ್ಟೆ ಯುವತಿಯೊಬ್ಬಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ. ರೆಸ್ಯೂಮ್ ಅನ್ನು ಕೇಕ್ ಮೇಲೆ ಮುದ್ರಿಸಿ ಅದನ್ನು ಉದ್ಯೋಗದಾತರಿಗೆ ಕಳುಹಿಸಿದ್ದಾಳೆ.
ನೈಕಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಅನ್ನೋದು ಆಕೆಯ ಉದ್ದೇಶ. ಕಾರ್ಲಿ ಪಾವ್ಲಿನಾಕ್ ಬ್ಲ್ಯಾಕ್‌ಬರ್ನ್ ಎಂಬ ಮಹಿಳೆ ಔಪಚಾರಿಕವಾಗಿ ಉದ್ಯೋಗ ಅರ್ಜಿ ಸಲ್ಲಿಸಲು ಇಮೇಲ್ ಮಾಡುವ ಬದಲು, ವಿಶಿಷ್ಟವಾದ ರೆಸ್ಯೂಮ್ ಕಳುಹಿಸಲು ನಿರ್ಧರಿಸಿದ್ಲು.
ಕೇಕ್ ಮೇಲೆ ರೆಸ್ಯೂಮ್ ಪ್ರಿಂಟ್ ಮಾಡಿ ನೈಕಿ ಕಂಪನಿಗೆ ಕಳಿಸಿದ್ದಾಳೆ. ದೊಡ್ಡ ಪಾರ್ಟಿಗೆ ಕೇಕ್ ಕಳುಹಿಸುವುದಕ್ಕಿಂತ ಇದು ಬೆಸ್ಟ್ ಅಂತಾ ಯುವತಿ ಹೇಳಿಕೊಂಡಿದ್ದಾಳೆ. ಉತ್ತರ ಕೆರೊಲಿನಾದಿಂದ ಒರೆಗಾನ್‌ನ ಬೀವರ್ಟನ್‌ಗೆ ಹೋಗಲು ಆಕೆ ಬಯಸಿದ್ದಳಂತೆ. ತಾನು ಸೇರಬಯಸಿದ್ದ ತಂಡಕ್ಕೆ ವಿಶಿಷ್ಟ ಕೇಕ್ ಅನ್ನು ಕಳುಹಿಸಿದ್ದಾಗಿ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ.
ಯುವತಿಗೆ ನೈಕಿ ಕಂಪನಿಯಲ್ಲಿ ಕೆಲಸ ಸಿಗಲಿಲ್ಲ. ಆದ್ರೆ ಆಕೆಯ ಸೃಜನಶೀಲತೆ ಮತ್ತು ನಿರ್ಣಯವು ಇಂಟರ್ನೆಟ್‌ನಲ್ಲಿ ಸಾಕಷ್ಟು ಜನರನ್ನು ಆಕರ್ಷಿಸಿದೆ. ಹಲವರು ಇದನ್ನು ಮೆಚ್ಚಿಕೊಂಡಿದ್ದಾರೆ. ಇನ್ನೊಂದಷ್ಟು ಮಂದಿ ಭಯಾನಕ ಗಿಮಿಕ್ ಅಂತಲೂ ಟೀಕಿಸಿದ್ದಾರೆ.