ನೇಲ್ ಪಾಲಿಶ್ ಹಚ್ಚುವಾಗ ಬಬಲ್ ಗಳು ಬರುವುದನ್ನು ನೀವು ಕಂಡಿರಬಹುದು. ಇವು ಹೆಚ್ಚಾಗಿ ನೇಲ್ ಪಾಲಿಶ್ ಒಣಗಿಸುವ ಪ್ರಕ್ರಿಯೆಯಲ್ಲಿ ಉಂಟಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನಿಮ್ಮ ನೇಲ್ ಪಾಲಿಶ್ ದಪ್ಪವಾಗಿರುವುದು.
ಇದು ಒಣಗಲು ಹೆಚ್ಚು ಸಮಯ ಬೇಕಾಗುವುದರಿಂದ ಅದರ ಮೊದಲೇ ನೀವು ಇನ್ನೊಂದು ಕೋಟ್ ಹಚ್ಚಿದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನೇಲ್ ಪಾಲಿಶ್ ಹಚ್ಚುವುದಕ್ಕೂ ಮೊದಲು ಸರಿಯಾಗಿ ಬಣ್ಣರಹಿತ ಪಾಲಿಶ್ ಆದ ಬೇಸ್ ಕೋಟ್ ಹಚ್ಚಿ.
ಬಣ್ಣ ಹಚ್ಚುವ ಮೊದಲು ಉಗುರುಗಳನ್ನು ಸ್ವಚ್ಛಗೊಳಿಸಿ. ಆ ಕೊಳಕು ಪಾಲಿಶ್ ಗೆ ಅಂಟಿಕೊಳ್ಳದಿರಲಿ. ಸಾಬೂನಿನಿಂದ ಉಗುರು ಹಾಗು ಬೆರಳುಗಳನ್ನು ಸ್ವಚ್ಛಗೊಳಿಸಿ. ಫೌಂಡೇಷನ್ ಹಚ್ಚುವ ಮುನ್ನ ಪ್ರೈಮರ್ ಬಳಸುವಂತೆ ಮೊದಲು ಬೇಸ್ ಕೋಟ್ ಹಚ್ಚಿ. ಇದರಿಂದ ಹಚ್ಚಿದ ಬಣ್ಣ ಹಾಗೆಯೇ ಉಳಿಯುತ್ತದೆ.
ನೇಲ್ ಪಾಲಿಶ್ ತುಂಬಾ ಹಳೆಯದಾಗಿದ್ದರೆ ಅದರ ಬಣ್ಣದ ಸ್ಥಿರತೆಯನ್ನು ಮೊದಲು ಪರೀಕ್ಷಿಸಿಕೊಳ್ಳಿ. ದಪ್ಪ, ಜಿಗುಟಾಗಿದ್ದರೆ ನಿಮ್ಮ ಉಗುರಿನ ಅಂದವನ್ನು ಹಾಳು ಮಾಡಬಹುದು.
ನೇಲ್ ಪಾಲಿಶ್ ಬಾಟಲ್ ಅಲ್ಲಾಡಿಸುವ ತಪ್ಪು ಮಾಡದಿರಿ. ಸುತ್ತ ಮುತ್ತ ಹಿಂದೆ ಮುಂದೆ ತಿರುಗಿಸುವುದರಿಂದ ಇದರೊಳಗೆ ಬಬಲ್ ಉಂಟಾಗಬಹುದು. ತುಂಬಾ ದಪ್ಪವಾಗಿ ಹಚ್ಚದೆ ತೆಳುವಾಗಿ ಹಚ್ಚುವುದರಿಂದ ಬಬಲ್ ಗಳು ಉಂಟಾಗುವುದಿಲ್ಲ.